Sanju success : ರಾಜಕುಮಾರ ಹಿರಾನಿ ಮುಂದಿನ ಚಿತ್ರಕ್ಕೆ ನಾಯಕನಾರು, ರಣಬೀರ್ ?

ಮುನ್ನಾಭಾಯಿ, 3 ಈಡಿಯಟ್ಸ್, ಪಿಕೆ ಮತ್ತು ಸಂಜು ಚಿತ್ರಗಳನ್ನು  ಹಿಟ್ ಚಿತ್ರ ನೀಡಿರುವ  ರಾಜ್ಕುಮಾರ್ ಹಿರಾನಿ ಮುಂದಿನ ಚಿತ್ರದಲ್ಲಿ ನಟಿಸಲು ಬಾಲಿವುಡ್ A ಸ್ಟಾರಗಳು ತುದಿಗಾಲ ಮೇಲೆ ನಿಂತಿದ್ದಾರೆ.  ಹಿಟ್ ಚಿತ್ರ ನೀಡುವ ನಿರ್ದೇಶಕ ರಾಜ್ಕುಮಾರ್ ಹಿರಾನಿಯ ಸಂಜು ಚಿತ್ರ 300 ಕೋಟಿ ಗಳಿಕೆಯತ್ತ ಮುನ್ನುಗ್ಗಿದೆ. ಸಂಜು ಯಶಸ್ಸಿನ ನಂತ್ರ ರಣಬೀರ್ ಕಪೂರ್, ರಾಜ್ಕುಮಾರ್ ಹಿರಾನಿ ಜೊತೆ ಇನ್ನೊಂದಿಷ್ಟು ಸಿನಿಮಾ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಸಮಾರಂಭವೊಂದರಲ್ಲಿ ಮಾತನಾಡಿದ ರಣಬೀರ್ ಕಪೂರ್, ರಾಜ್ಕುಮಾರ್ ಹಿರಾನಿ, ಅಮೀರ್ ಖಾನ್ ಹಾಗೂ ಸಂಜಯ್ ದತ್ ಜೊತೆ ಎರಡು ಚಿತ್ರ ಮಾಡಿದ್ದಾರೆ. ಆ ಎರಡೂ ಚಿತ್ರ ಹಿಟ್ ಆಗಿದೆ. ರಾಜ್ಕುಮಾರ್ ನನ್ನ ಜೊತೆ ಇನ್ನೊಂದು ಚಿತ್ರವನ್ನು ಯಾವಾಗ ಮಾಡ್ತಾರೆ ಎಂದು ನಾನು ಕಾಯ್ತಿದ್ದೇನೆಂದು ರಣಬೀರ್ ಹೇಳಿದ್ದಾರೆ.

ನನ್ನ ಜೊತೆ ಎಷ್ಟು ಚಿತ್ರ ಮಾಡ್ತಿರಾ ಎಂದು ರಣಬೀರ್, ರಾಜ್ಕುಮಾರ್ ಹಿರಾನಿಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ನಗುತ್ತ ಉತ್ತರ ನೀಡಿದ ರಾಜ್ಕುಮಾರ್ ಹಿರಾನಿ ಐದು ಚಿತ್ರಗಳನ್ನು ಮಾಡ್ತೇನೆ ಎಂದಿದ್ದಾರೆ. ರಾಜ್ಕುಮಾರ್ ಹಿರಾನಿ ಮುಂದಿನ ಚಿತ್ರ ಯಾವುದು ಎಂಬ ಪ್ರಶ್ನೆ ಈಗ ಎಲ್ಲರನ್ನು ಕಾಡ್ತಿದೆ. ಅದ್ರಲ್ಲೂ ರಣಬೀರ್ ಬಣ್ಣ ಹಚ್ಚುತ್ತಾರಾ ಎಂಬುದನ್ನು ಕೂಡ ಕಾದು ನೋಡಬೇಕಿದೆ.

Leave a Reply

Your email address will not be published.

Social Media Auto Publish Powered By : XYZScripts.com