ಕೊಡಗು : ಸರ್ಕಾರಿ ಶಾಲೆಯ ಆವರಣಕ್ಕೆ ಭೇಟಿ ಕೊಟ್ಟ ಕಾಡಾನೆಗಳು : ಪೋಷಕರಲ್ಲಿ ಆತಂಕ..

ಕೊಡಗು : ಸರ್ಕಾರಿ ಶಾಲೆಯ ಆವರಣಕ್ಕೆ ಗಜಪಡೆ ಭೇಟಿ ಕೊಟ್ಟಿರುವ ಘಟನೆ ಕೊಡಗು ಜಿಲ್ಲೆ ಸಿದ್ದಾಪುರ ಸಮೀಪದಲ್ಲಿ ನಡೆದಿದೆ. ಗುಹ್ಯ ಸರ್ಕಾರಿ ಶಾಲೆ ಆವರಣದಲ್ಲಿ ಕಾಡಾನೆಗಳು ಪ್ರತ್ಯಕ್ಷಗೊಂಡಿವೆ. ಮರಿ ಆನೆ ಸೇರಿದಂತೆ 6 ಕಾಡಾನೆಗಳು ಪ್ರತ್ಯಕ್ಷವಾಗಿವೆ.

ಆನೆಗಳ ಸ್ಕೂಲ್ ವಾಕ್ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೋಮವಾರ ಶಾಲೆಗೆ ರಜೆ ಇದ್ದ ಹಿನ್ನೆಲೆ ಅನಾಹುತ ತಪ್ಪಿದಂತಾಗಿದೆ. ನಿನ್ನೆ ಮಳೆಯಾಗಿರುವ ಹಿನ್ನೆಲೆ ಶಾಲಾ-ಕಾಲೇಜಿಗೆ ರಜೆ ನೀಡಲಾಗಿತ್ತು. ಆನೆಗಳ ಓಡಾಟದಿಂದ ಶಾಲಾ ಮಕ್ಕಳು, ಪೋಷಕರಲ್ಲಿ ಆತಂಕ ಮೂಡಿದೆ.

Leave a Reply

Your email address will not be published.