FIFA Semi-Final : ಫ್ರಾನ್ಸ್ vs ಬೆಲ್ಜಿಯಂ ನಡುವೆ ಫೈನಲ್ ಸ್ಥಾನಕ್ಕಾಗಿ ಜಿದ್ದಾಜಿದ್ದಿ..

ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ಕ್ರೀಡಾಂಗಣದಲ್ಲಿ ಮಂಗಳವಾರ ಫ್ರಾನ್ಸ್ ಹಾಗೂ ಬೆಲ್ಜಿಯಂ ತಂಡಗಳ ನಡುವೆ ಫಿಫಾ ವಿಶ್ವಕಪ್-2018 ಟೂರ್ನಿಯ ಸೆಮಿಫೈನಲ್ ಪಂದ್ಯ ನಡೆಯಲಿದೆ. ಫಿಫಾ ವಿಶ್ವಕಪ್ ಫೈನಲ್ ಸ್ಥಾನಕ್ಕಾಗಿ ಉಭಯ ತಂಡಗಳು ಜಿದ್ದಾಜಿದ್ದಿ ನಡೆಸಲಿವೆ.

ಜುಲೈ 6 ರಂದು ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉರುಗ್ವೆ ತಂಡವನ್ನು 2-0 ಗೋಲುಗಳ ಅಂತರದಿಂದ ಜಯ ಗಳಿಸಿದ ಫ್ರಾನ್ಸ್ ಸೆಮಿಫೈನಲ್ ಗೆ ಅಡಿಯಿಟ್ಟಿದೆ. ಅದೇ ದಿನ ನಡೆದ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬ್ರೆಜಿಲ್ ತಂಡವನ್ನು ಮಣಿಸಿದ ಬೆಲ್ಜಿಯಂ ಸೆಮಿಫೈನಲ್ ಗೆ ಕಾಲಿಟ್ಟಿದೆ.

ಬಲಿಷ್ಠ ತಂಡಗಳ ನಡುವಿನ ಸೆಮಿಫೈನಲ್ ಕದನ ವಿಶ್ವಾದ್ಯಂತ ಫುಟ್ಬಾಲ್ ಅಭಿಮಾನಿಗಳಲ್ಲಿ ಕುತೂಹಲವನ್ನು ಹೆಚ್ಚಿಸಿದೆ. ಫ್ರಾನ್ಸ್ ಎಮ್ ಬಾಪ್ಪೆ, ಪಾಲ್ ಪೊಗ್ಬಾ, ಆ್ಯಂಟೋನಿ ಗ್ರೀಜ್ಮನ್ ಅವರನ್ನು ಹೆಚ್ಚು ನೆಚ್ಚಿಕೊಂಡಿದೆ. ಬೆಲ್ಜಿಯಂ ತಂಡದ ಈಡನ್ ಹಜಾರ್ಡ್ ಹಾಗೂ ರೊಮೆಲು ಲುಕಾಕು ಫ್ರಾನ್ಸ್ ತಂಡಕ್ಕೆ ಸವಾಲಾಗಿ ಪರಿಣಮಿಸಲಿದ್ದಾರೆ. ಜರ್ಮನಿ, ಅರ್ಜೆಂಟೀನಾ, ಬ್ರೆಜಿಲ್, ಸ್ಪೇನ್ ನಂತಹ ಬಲಿಷ್ಠ ತಂಡಗಳು ಟೂರ್ನಿಯಿಂದ ಈಗಾಗಲೇ ನಿರ್ಗಮಿಸಿವೆ.

Leave a Reply

Your email address will not be published.

Social Media Auto Publish Powered By : XYZScripts.com