ಕೋಲಾರ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ..

ಕೋಲಾರ : ಕೋಲಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್‌ ಪ್ರತಿಭಟನೆ. ಅಂಗನವಾಡಿ ಕಾರ್ಯಕರ್ತರಿಂದ ವಿವಿದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರವು ಕನ್ನಡ ಸರ್ಕಾರಿ ಶಾಲೆಗಳಲ್ಲಿ LKG/UKG ಇಂಗ್ಲಿಷ್ ಮಾಧ್ಯಮ ತರಗತಿ ಆರಂಭಿಸಲಾಗಿದೆ.

ಇದರಿಂದ ಮೂರು ವರ್ಷ ನಂತರ ಮಕ್ಕಳು ಅಂಗನವಾಡಿ ಶಾಲೆಗೆ ಬರುತ್ತಿಲ್ಲ.ಇದರಿಂದ ಅಂಗನವಾಡಿ ಕೇಂದ್ರಗಳಲ್ಲಿ ಸಂಖ್ಯಾ ಬಲ ಕುಸಿದು ಕೇಂದ್ರಗಳನ್ಮು ಮುಚ್ಚುವ ಹಂತಕ್ಕೆ ಬಂದಿದೆ. ಪ್ರಾಥಮಿಕ ಶಾಲೆಯ ಜೊತೆ ಅಂಗನವಾಡಿ ಮರ್ಜ್ ಮಾಡಿ ಇಲ್ಲ ಮಕ್ಕಳ ಕೊರತೆ ನಿವಾರಿಸಿ ಎಂದು ಸರ್ಕಾರ ವನ್ನು ಅಂಗನವಾಡಿ ಕಾರ್ಯಕರ್ತರು ಅಗ್ರಹಿಸಿದರು.

ಜೊತೆಗೆ ಗೌರವ ಧನ ಸಹ ಸಕಾಲಕ್ಕೆ ಬರುತ್ತಿಲ್ಲ,ಐದು ತಿಂಗಳು ಕಳೆದರು ಗೌರಧನ ಸಿಕ್ಕಿಲ್ಲ ಎಂದು ಹೀಗೆ ಹಲವು ಬೇಡಿಕೆ ಈಡೇರಿಸುವಂತೆ ಪ್ರತಿಭಟನಾ ಕಾರ್ಯಕರ್ತರು ಒತ್ತಾಯಿದರು.

Leave a Reply

Your email address will not be published.

Social Media Auto Publish Powered By : XYZScripts.com