ತಾಯಿ ಆರೋಗ್ಯ ವಿಚಾರಿಸಲು ಉಡುಪಿಗೆ ಬಂದ ಅಂಡರ್ ವರ್ಲ್ಡ್ ಡಾನ್ ಬನ್ನಂಜೆ ರಾಜ..!

ತಾಯಿಯ ಆರೋಗ್ಯ ವಿಚಾರಿಸಲು ಅಂಡರ್ ವರ್ಲ್ಡ್ ಡಾನ್ ಬನ್ನಂಜೆ ರಾಜ ಉಡುಪಿಗೆ ಬಂದಿದ್ದಾನೆ. ಹಿಂಡಲಗಾ ಜೈಲಿನಿಂದ ಬನ್ನಂಜೆ ರಾಜನನ್ನು ಪೋಲೀಸರು ಕರೆತಂದಿದ್ದಾರೆ. ಅನಾರೋಗ್ಯದಿಂದ ಬನ್ನಂಜೆ ರಾಜನ ತಾಯಿ ಬಳಲುತ್ತಿದ್ದು, ಮಾನವೀಯ ನೆಲೆಯಲ್ಲಿ ಮನೆ ಭೇಟಿಗೆ ನ್ಯಾಯಾಲಯ ಅವಕಾಶ ನೀಡಿದೆ. ಮೊರೆಕ್ಕೋದಲ್ಲಿ ಬನ್ನಂಜೆ ರಾಜನ ಬಂಧನವಾಗಿತ್ತು.

ವಿಚಾರಣಾಧೀನ‌ ಖೈದಿಯಾಗಿ ಹಿಂಡಲಗಾ ಜೈಲಿನಲ್ಲಿದ್ದಾನೆ. ಹದಿನೈದು ಪ್ರಕರಣಗಳ ವಿಚಾರಣೆ ಎದುರಿಸುತ್ತಿರುವ ಭೂಗತ ಪಾತಕಿಗೆ ಸೋಮವಾರ ತಾಯಿಯ ಭೇಟಿಗೆ ಅವಕಾಶ ನೀಡಲಾಗಿದೆ. ಮಲ್ಪೆ ಸಮೀಪ ಇರುವ ಬನ್ನಂಜೆ ರಾಜನ ಮನೆಯಿದ್ದು, ಇಂದು ರಾತ್ರಿ ನಗರ ಠಾಣೆಯಲ್ಲೇ ಬನ್ನಂಜೆ ರಾಜನನ್ನು ಉಳಿಸಿಕೊಳ್ಳಲಿದ್ದಾರೆ. ನಾಳೆ ಬೆಳಗ್ಗೆ ಮನೆಗೆ ಕರೆದುಕೊಂಡು ಹೋಗುವ ಸಾಧ್ಯತೆಯಿದೆ.

Leave a Reply

Your email address will not be published.