ತುಮಕೂರು‌ : ಬಡಕುಟುಂಬಕ್ಕೆ ನೀಡಿದ್ದ ಆಶ್ವಾಸನೆ ಮರೆತು ಬಿಟ್ಟರೇ ಸಿಎಂ ಕುಮಾರಸ್ವಾಮಿ …?

ತುಮಕೂರು‌ : ಬಡಕುಟುಂಬಕ್ಕೆ ಆಶ್ವಾಸನೆ ನೀಡಿ‌ ಮರೆತ್ರಾ ಸಿಎಂ ಕುಮಾರಸ್ವಾಮಿ…? ಮುಖ್ಯ ಮಂತ್ರಿಗಳ ಮೊದಲ ಜನತಾ ದರ್ಶನದಲ್ಲಿ ತುಮಕೂರು ತಾಲ್ಲೂಕಿನ ಜಿ ಬೊಮ್ಮನಹಳ್ಳಿ ಗ್ರಾಮದವರಾದ ರಮೇಶ್, ಪ್ರೇಮ ದಂಪತಿಗಳು ಸಿಎಂ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಸಿಎಂ ಕುಮಾರಸ್ವಾಮಿ ಮಾತು ಕೊಟ್ಟಿದ್ದರು. ಬೋನ್ ಮ್ಯಾರೋ ಖಾಯಿಲೆಗೆ ತುತ್ತಾದ ಕಂದಮ್ಮಗಳಿಗೆ ಅಭಯ ನೀಡಿದ್ದರು. ಇಬ್ಬರಿಗೂ ಶಸ್ತ್ರ ಚಿಕಿತ್ಸೆಯ ಭರವಸೆ ನೀಡಿದ್ದರು. ಸಂಪೂರ್ಣ ವೆಚ್ಚ ಭರಿಸಿ ಚಿಕಿತ್ಸೆ ಕೊಡಿಸೋದಾಗಿ ಆಶ್ವಾಸನೆ‌ ನೀಡಿದ್ದರು.

ಎರಡು ಮಕ್ಕಳಿಂದ ಶಸ್ತ್ರ ಚಿಕಿತ್ಸೆ 70 ಲಕ್ಷ ವೆಚ್ಚದ ಅಗತ್ಯವಿದ್ದು, ಮುಖ್ಯಮಂತ್ರಿ‌ ನಿಧಿಯಿಂದ ಕುಮಾರಸ್ವಾಮಿ ಮೂರು ಲಕ್ಷ ನೀಡಿದ್ದಾರೆ. ಉಳಿದ 67 ಲಕ್ಷ ಹಣಕ್ಕಾಗಿ ಹೊಂದಿಸುವುದಕ್ಕಾಗಿ ಬಡ ಕುಟುಂಬ ಪರದಾಡುತ್ತಿದೆ. ಕರುಳ ಕುಡಿಗಳನ್ನ ಉಳಿಸಿಕೊಳ್ಳಲು ತಂದೆ ತಾಯಿಗಳು ಪರದಾಡುತ್ತಿದ್ದು, ಸ್ವಾಭಿಮಾನದ ನಡುವೆ ಜನತೆಯ ಸಹಾಯ ಬೇಡಿದ್ದಾರೆ.

Leave a Reply

Your email address will not be published.