Sandalwood news : ಸುದೀಪ್ ಹಾಗೂ ಶಿವರಾಜ್ ಕುಮಾರ್ `ಕಲಿ’ಗೆ ಅದೇನು ಕೇಡುಗಾಲ ಬಂತು

 

 

ಗಿಮಿಕ್ ನಿರ್ದೇಶಕ ಪ್ರೇಮ್‍ರವರ ಡ್ರೀಮ್ ಪ್ರಾಜೆಕ್ಟ್ ಎಂದೇ ಸುದ್ದಿಯಾಗಿದ್ದ ಸುದೀಪ್ ಹಾಗೂ ಶಿವರಾಜ್ ಕುಮಾರ್ ಅಭಿನಯಿಸಲಿದ್ದ ‘ಕಲಿ’ ಚಿತ್ರ ಮುಹೂರ್ತ ಮುಗಿಸಿ ಸುಮ್ಮನಾಗಿಬಿಟ್ಟಿದೆ. ಮುಹೂರ್ತ ಮುಗಿದು ಎರಡು ವರ್ಷವಾದರೂ ಚಿತ್ರ ಸೆಟ್ಟೇರಿದಿದ್ದರಿಂದ ಕಲಿ ಚಿತ್ರದ ಅಬ್ಬರದ ಕನಸು ಕಂಡಿದ್ದ ಸುದೀಪ್ ಅಭಿಮಾನಿಗಳು ಚಿತ್ರ ಸೆಟ್ಟೇರುವುದೋ , ಇಲ್ಲವೋ ಎಂಬ ಪ್ರಶ್ನೆ ಕಾಡುತ್ತಲೇ ಇತ್ತು. ಇಷ್ಟಾದರೂ ಚಿತ್ರ ಬಗ್ಗೆ ಸುದೀಪ್ ಆಗಲೀ, ಪ್ರೇಮ್ ಆಗಲಿ ತುಟಿ ಬಿಚ್ಚಿರಲಿಲ್ಲ. ನಿರ್ಮಾಪಕ ಮನೋಹರ್ ಮಾತ್ರ ಚಿತ್ರ ನಿಂತು ಹೋಗಿಲ್ಲ ಡಿಲೇ ಆಗಿದೆ ಅಷ್ಡೇ ಎಂದಿದ್ದರು.

ಆದರೆ ಸುದೀಪ್ ಈಗ ಚಿತ್ರ ಸೆಟ್ಟೇರುವುದಿಲ್ಲ, ಸಿನಿಮಾ ಡ್ರಾಪ್ ಆಗಿದೆ ಎಂದಿದ್ದಾರೆ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಂ.1 ಯಾರಿ ವಿತ್ ಶಿವಣ್ಣ, ಕಾರ್ಯಕ್ರಮಕ್ಕೆ ಭಾಗವಹಿಸಿದ್ದ ಸುದೀಪ್ ಸತ್ಯ ಬಿಚ್ಚಿಟ್ಟಿದ್ದಾರೆ. ಮಹಾಭಾರತ ಯಾವುದೋ ಭಾಗವನ್ನು ಆಯ್ದುಕೊಂಡು ಸ್ಕ್ರಿಪ್ಟ್ ರೆಡಿಯಾಗಿತ್ತು, ಅದನ್ನು ಸುದೀಪ್ ಮೆಚ್ಚಿಕೊಂಡಿದ್ದರು.

ಆದರೆ ಮುಹೂರ್ತದ ನಂತರ ಈ ಸ್ಕ್ರಿಪ್ಟ್ ಸರಿಯಿಲ್ಲ, ಯಾವುದೊ ಒಂದು ಪಾಸಿಟಿವ್ ಆಗಿಲ್ಲ ಎನ್ನಿಸುತ್ತಿತ್ತು ಹಾಗೂ ಮಹಾಭಾರತದ ಆ ಭಾಗವನ್ನು ಮುಟ್ಟಬೇಡಿ ಅದು ಸರಿಯಿಲ್ಲ, ಆ ಸ್ಕ್ರಿಪ್ಟ್ ಪಾಸಿಟಿವ್ ಆದುದ್ದಲ್ಲ ಎಂದು ತುಂಬಾ ಜನ ಹೇಳಿದ್ದರು, ಹಾಗಾಗಿ ಈ ಸ್ಕ್ರಿಪ್ಟ್ ಬೇಡ ಬೇರೆಯದು ಮಾಡೋಣ ಎಂದು ಪ್ರೇಮ್ ಅವರನ್ನು ಒಪ್ಪಿಸಿದ್ದೇನೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com