Box office news : ‘3 ಈಡಿಯೆಟ್ಸ್’ ದಾಖಲೆ ಮುನ್ನುಗ್ಗುತ್ತಿರುವ ‘ಸಂಜು’ !
‘ರಣಬೀರ ಕಪೂರ್ ಅಭಿನಯದ ರಾಜ್ ಕುಮಾರ್ ಹಿರಾನಿ ನಿರ್ದೇಶನದ ‘ಸಂಜು’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಮೀರ್ ಖಾನ್ ಅಭಿನಯಿಸಿದ್ದ ‘3 ಈಡಿಯೆಟ್ಸ್’ ಚಿತ್ರದ ದಾಖಲೆಯನ್ನ ಮುರಿದು ಮುನ್ನುಗ್ಗುತ್ತಿದೆ. ದಿನದಿಂದ ದಿನಕ್ಕೆ ಹೊಸ ದಾಖಲೆಗಳನ್ನು ತನ್ನ ಹೆಸರಗೆ ಬರೆಯಿಸಿರೊಳ್ಳು್ತ್ತಾ ಗುಳಿಯಂತೆ ಮುನ್ನುಗ್ಗುತ್ತಿದೆ….
ಅಮೀರ್ ಖಾನ್ ಅಭಿನಯದಲ್ಲಿ ರಾಜ್ ಕುಮಾರ್ ಹಿರಾನಿ ನಿರ್ದೇಶನ ಮಾಡಿದ್ದ ‘3 ಈಡಿಯೆಟ್ಸ್’ ಸಿನಿಮಾ ಮೊದಲ ಏಳು ದಿನದಲ್ಲಿ 202.4 ಕೋಟಿ ಗಳಿಸಿತ್ತು. ಇದೀಗ ಈ ದಾಖಲೆಯನ್ನ ಹಿಂದಿಕ್ಕಿ ಮುನ್ನುಗ್ಗುತ್ತಿರುವ ಸಂಜು 202.5 ಕೋಟಿ ಬಾಚಿಕೊಂಡಿದೆ. ಈ ವರ್ಷ ತೆರೆಕಡ ಸಲ್ಮಾನ ಖಾನ ಸಿನಿಮಾ ರೇಸ್ ಸೇರಿದಂತೆ, ಯಾವುದೇ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಮೋಡಿಮಾಡಲು ಸಾಧ್ಯವಾಗಿಲ್ಲ..
ಅದರಲ್ಲೂ ಈ ವರ್ಷದ ಅತಿ ದೊಡ್ಡ ಯಶಸ್ಸು ಕಂಡಿರುವ ಸಂಜು 200 ಕೋಟಿ ಕ್ಲಬ್ ಗೆ ಸೇರಿದ ಚಿತ್ರವಾಗಿದೆ. ಸೋಮವಾರಕ್ಕೆ 250 ಕೋಟಿ ಗಳಿಸಿರುವ ರಾಜ್ ಕುಮಾರ್ ಹಿರಾನಿ ನಿರ್ದೇಶನದ ಸಂಜು ದತ್ ಜೀವನವನ್ನು ಆಧರಿಸಿದ ‘ಸಂಜು’ 400 ಕೋಟಿ ಕ್ಲಬ್ ಸೇರುವುದರಲ್ಲಿ ಅನುಮಾನವಿಲ್ಲ….