ರೋಹಿತ್ ಶರ್ಮಾ ದಾಖಲೆ : T20ಯಲ್ಲಿ 3ನೇ ಶತಕ : 2000 ರನ್ ಪೂರೈಸಿದ ಹಿಟ್ ಮ್ಯಾನ್

ರವಿವಾರ ಬ್ರಿಸ್ಟಲ್ ಅಂಗಳದಲ್ಲಿ ನಡೆದ ಮೂರನೇ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್ ಭಾರತ ಜಯಗಳಿಸಿದ್ದು, ಸರಣಿಯನ್ನು ತನ್ನದಾಗಿಸಿಕೊಂಡಿದೆ. ಈ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸಮನ್ ರೋಹಿತ್ ಶರ್ಮಾ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

ಟಿ-20 ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ರೋಹಿತ್ ಶರ್ಮಾ ಮೂರನೇ ಸೆಂಚುರಿ ಬಾರಿಸಿದರು. ಈ ಮೂಲಕ ನ್ಯೂಜಿಲೆಂಡಿನ ಕಾಲಿನ್ ಮನ್ರೋ ಅವರ ದಾಖಲೆಯನ್ನು ರೋಹಿತ್ ಸರಿಗಟ್ಟಿದ್ದಾರೆ. ಟಿ-20 ಮಾದರಿಯಲ್ಲಿ ಮೂರು ಶತಕ ಗಳಿಸಿದ ಭಾರತದ ಮೊದಲ ಬ್ಯಾಟ್ಸಮನ್ ಎಂಬ ಹೆಗ್ಗಳಿಕೆಗೆ ಹಿಟ್ ಮ್ಯಾನ್ ಪಾತ್ರರಾಗಿದ್ದಾರೆ.

ಅಲ್ಲದೇ ಟಿ-20 ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ರೋಹಿತ್ ಶರ್ಮಾ 2000 ರನ್ ಕೂಡ ಪೂರೈಸಿದರು. ರೋಹಿತ್, ಟಿ-20ಯಲ್ಲಿ ಎರಡು ಸಾವಿರ ರನ್ ಗಡಿ ದಾಟಿದ ವಿಶ್ವದ 5ನೇ ಬ್ಯಾಟ್ಸಮನ್ ಎನಿಸಿದರು. ರೋಹಿತ್ ಅವರನ್ನು ಹೊರತು ಪಡಿಸಿ ಮಾರ್ಟಿನ್ ಗಪ್ಟಿಲ್, ಬ್ರೆಂಡನ್ ಮೆಕ್ಕಲಂ, ಶೋಯೆಬ್ ಮಲಿಕ್ ಹಾಗೂ ವಿರಾಟ್ ಕೊಹ್ಲಿ ಟಿ-20ಯಲ್ಲಿ 2000 ರನ್ ಸರದಾರರಾಗಿದ್ದಾರೆ.

Leave a Reply

Your email address will not be published.