ಮೈಸೂರು : ವಾಹನ ಡಿಕ್ಕಿಯಾಗಿ ಅಪರೂಪದ ಪುನುಗು ಬೆಕ್ಕು ಸಾವು..

ಮೈಸೂರಿನ ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಅಪರಿಚಿತ ವಾಹನವೊಂದು ಅಪರೂಪದ ಪ್ರಾಣಿ ಪುನುಗು ಬೆಕ್ಕಿಗೆ ಡಿಕ್ಕಿ ಹೊಡೆದಿದ್ದು, ಪುನುಗು ಬೆಕ್ಕು ಸ್ಥಳದಲ್ಲಿಯೇ ಸಾವನ್ನಪ್ಪಿದೆ. ನಿನ್ನೆ ರಾತ್ರಿ ಚಾಮುಂಡಿಬೆಟ್ಟದ ರಸ್ತೆಯಲ್ಲಿ ವಾಹನ ರಸ್ತೆ ದಾಟುತ್ತಿದ್ದ ಪುನುಗು ಬೆಕ್ಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೆಕ್ಕು ಸ್ಥಳದಲ್ಲಿಯೇ ಸಾವನ್ನಪ್ಪಿದೆ.

ಇದು ಅಪರೂಪದ ಬೆಕ್ಕಾಗಿದ್ದು, ಅಳಿವಿನ ಅಂಚಿನಲ್ಲಿದೆ. ಚಾಮುಂಡಿ ಬೆಟ್ಟದಲ್ಲಿ ರಾತ್ರಿ ವಾಹನ ಚಾಲನೆ ಮಾಡುವವರು ದಯವಿಟ್ಟು ಅತಿವೇಗದಲ್ಲಿ ವಾಹನ ಚಾಲನೆ ಮಾಡಬೇಡಿ. ಇನ್ನೊಬ್ಬರ ಪ್ರಾಣದೊಂದಿಗೆ ಚೆಲ್ಲಾಟ ನಡೆಸಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ. ಇತ್ತೀಚೆಗೆ ಅತಿವೇಗದಿಂದ ಬಂದ ಕಾರೊಂದು ದ್ವಿಚಕ್ರವಾಹನ ಸವಾರರ ಪ್ರಾಣವನ್ನು ಬಲಿತೆಗೆದುಕೊಂಡಿತ್ತು.

ಪ್ರತಿಯೊಬ್ಬರ ಜೀವವೂ ಅಮೂಲ್ಯವಾಗಿದ್ದು, ಯಾರಿಗೂ ಯಾರ ಪ್ರಾಣವನ್ನು ತೆಗೆದುಕೊಳ್ಳುವ ಹಕ್ಕಿಲ್ಲ. ಅತಿವೇಗದಿಂದ ವಾಹನ ಚಲಾಯಿಸದೇ ಸುರಕ್ಷಿತ ಪ್ರಯಾಣ ಮಾಡಿ ಎಂದು ಮನವಿ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com