ಕೋಲಾರ : ಬೆಂಬಲ ಬೆಲೆ ಘೋಷಿಸುವಂತೆ ಒತ್ತಾಯಿಸಿ ಮಾವು ಬೆಳೆಗಾರರ ಪ್ರತಿಭಟನೆ..

ಕೋಲಾರ : ಮಾವಿನ ನಗರಿ ಶ್ರೀನಿವಾಸಪುರ ಬಂದ್ ಹಿನ್ನಲೆ. ಶ್ರೀನಿವಾಸಪುರ ಹಳೇ ಬಸ್ ನಿಲ್ದಾಣದ ಎದುರು ಮಾವು ಬೆಳೆಗಾರರ ಪ್ರತಿಭಟನೆ ನಡೆಯಿತು. ರಸ್ತೆಗೆ ಮಾವು ಚೆಲ್ಲಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದು, ಮಾವಿಗೆ ಬೆಂಬಲ ಬೆಲೆ ಘೋಷಿಸಲು ಆಗ್ರಹಿಸಿದ್ದಾರೆ.

ಬಂದ್ ಕರೆ ಹಿನ್ನೆಲೆಯಲ್ಲಿ ಶ್ರೀನಿವಾಸಪುರ ಪಟ್ಟಣದಲ್ಲಿ ಸಂಚಾರ ಸಂಪೂರ್ಣ ಬಂದ್ ಆಗಿದೆ. ತಾಲೂಕು ಕಛೇರಿ ಮುಖ್ಯರಸ್ತೆಯಲ್ಲಿ ನಿಂತಲ್ಲೇ ನಿಂತ ವಾಹನಗಳು. ಶ್ರೀನಿವಾಸಪುರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಮಾವಿನ ತವರು ಶ್ರೀನಿವಾಸಪುರ ತಾಲೂಕು ಬಂದ್ ಹಿನ್ನೆಲೆಯಲ್ಲಿ ಪ್ರತಿಭಟನಾಕಾರು ಶ್ರೀನಿವಾಸಪುರದ ಹಳೇ ಬಸ್ ನಿಲ್ದಾಣದ ಬಳಿ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.  ಮಾವಿಗೆ ಬೆಂಬಲ‌ ಬೆಲೆ ಘೋಷಣೆ ಮಾಡುವಂತೆ ಪ್ರತಿಭಟನಾಕಾರರು ಒತ್ತಾಯ‌ ಪಡಿಸಿದ್ದಾರೆ.

ಸುಮಾರು 100 ಬೈಕ್ ಗಳೊಂದಿಗೆ ಪ್ರತಿಭಟನಾಕಾರರು ರ್ಯಾಲಿ ನಡೆಸುತ್ತಿದ್ದು, ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಘ ಹಾಗೂ ಮಾವು ಬೆಳೆದ ರೈತರಿಂದ ಬಂದ್ ಗೆ ಕರೆ ನೀಡಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com