ವಿಜಯಪುರ : ಪಾಕ್ ಧ್ವಜ ಹಾರಿಸಿದ ಪ್ರಕರಣ : ನ್ಯಾಯಾಲಯಕ್ಕೆ ಹಾಜರಾದ ಪರಶುರಾಮ ವಾಗ್ಮೋರೆ

ವಿಜಯಪುರ : ಗೌರಿ ಲಂಕೇಶ ಹತ್ಯೆಯ ಪ್ರಮುಖ ಆರೋಪಿ ಪರಶುರಾಮ ವಾಗ್ಮೋರೆಯನ್ನು ವಿಜಯಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 2012 ರಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲಾ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಸಿಂದಗಿ ಪಟ್ಟಣದ ತಹಶೀಲ್ದಾರ್ ಕಚೇರಿ ಮುಂದೆ ಪಾಕ್ ಧ್ವಜ ಹಾರಿಸಿದ್ದ ಆರೋಪಿ ಪರಶುರಾಮ್ ಸೇರಿದಂತೆ 6 ಜನ ಆರೋಪಿತರು ಹಾಜರಾಗಿದ್ದಾರೆ. ಕೋರ್ಟ್ ಆದೇಶದಂತೆ ಪರಶುರಾಮ್ ವಾಗ್ಮೊರೆಯನ್ನು ನ್ಯಾಯಲಯಕ್ಕೆ ಕರೆ ತಂದ ಜಿಲ್ಲಾ ಪೊಲೀಸರು ವಿಚಾರಣೆ ಬಳಿಕ ಮತ್ತೆ ಬೆಂಗಳೂರಿಗೆ ಕರೆಯ್ದೊಯದ್ದು ಎಸ್ ಐ ಟಿ ಅಧಿಕಾರಿಗಗಳಿಗೆ ಹಸ್ತಾಂತರಿಸಲಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com