Fitness challenge : ಇರಲಾರದೆ ಇರುವೆ ಬಿಟ್ಟುಕೊಂಡ ಪ್ರಧಾನ ಸೇವಕ ಮೋದಿ troll king…

ಫಿಟ್‍ನೆಸ್ ಫಜೀತಿಗಳು

ಸಿನಿಮಾಕ್ಕಾಗಿ ತಮ್ಮ ದೇಹವನ್ನೇ ಏರುಪೇರು ಮಾಡಿಕೊಳ್ಳುವ ಈಗಿನ ಹೀರೋಗಳ ಕಾಯಿಲೆ ಯಾರ್ಯಾರಿಗೋ ಹಬ್ಬಿ, ಏನೇನೋ ರಾದ್ಧಾಂತ ಮಾಡುತ್ತಿದೆ. ಸಿನಿಮಾದ ಪಾತ್ರಕ್ಕಾಗಿ ದಪ್ಪ-ಸಣ್ಣ ಆಗುವುದು, ದಾಡಿ ಬೆಳೆಸುವುದು, ಹುಚ್ಚಾಪಟ್ಟೆ ಹೇರ್‍ಸ್ಟೈಲ್ ಮಾಡಿಕೊಳ್ಳೋದು ಮಾಮೂಲಿ. ಪಾತ್ರವೊಂದು ನಿಜವಾಗಿಯೂ ಅಂತಹ ಮಾರ್ಪಾಟನ್ನು ಬಯಸಿದರೆ ತಪ್ಪೇನು ಇಲ್ಲ.

ಆದರೆ ಸ್ನಾಯುಗಳನ್ನು ತೋರಿಸೋದೆ ಟ್ರೆಂಡ್ ಆಗಿದೆ ಅನ್ನೋ ಕಾರಣಕ್ಕೆ, ಅಗತ್ಯವಿಲ್ಲದಿದ್ದರು ನಾಯಕರುಗಳು `ಮೈ’ಮಾಟ ತೋರಿಸುವ ದೃಶ್ಯಗಳನ್ನು ತುರುಕಿ ಸಿನಿಮಾವನ್ನೇ ಹಾಳು ಮಾಡುವ ಖಯಾಲಿ ಈಚೀಚೆಗೆ ಹೆಚ್ಚಾಗಿದೆ. ಜಿಮ್‍ಗಳಲ್ಲಿ ಕಸರತ್ತು ಮಾಡಿಕೊಂಡಿದ್ದ ಹೀರೋಗಳು ಈಗ ಫಿಟ್ನೆಸ್ ಹೆಸರಲ್ಲಿ ಒಬ್ಬರಿಗೊಬ್ಬರ ಕಾಲೆಳೆದುಕೊಂಡು ಅಭಿಮಾನಿಗಳಿಗೆ ಪುಕ್ಕಟೆ ಮನರಂಜನೆ ಕೊಡಲು ಶುರು ಮಾಡಿದ್ದಾರೆ.

ಮೊನ್ನೆ ಸುದೀಪ್ ಇಂತದ್ದೇ ಹುಚ್ಚಾಟ ಮಾಡಿಕೊಂಡು ಯಶ್ ಮತ್ತು ಉಪೇಂದ್ರರಿಗೆ ಫಿಟ್ನೆಸ್ ಸವಾಲು ಹಾಕಲು ಹೋಗಿ, ಅವರಿಂದ ಡಿಫೆರೆಂಟ್ ಆಗಿಯೇ ಉತ್ತರ ಪಡೆದು ಮುಖಕ್ಕೆ ಟವೆಲ್ ಮುಚ್ಕೊಳೋ ಕೆಲಸ ಮಾಡಿಕೊಂಡರು.


ಈಗ ಈ ಚಾಲೆಂಜ್ ದಹಲಿಯ ಸಂಸತ್‍ವರೆಗೂ ತಲುಪಿದೆ. ವಿಶ್ವಗುರು ಆಗಲು ಹೊರಟಿರುವ ನಮ್ಮ ದೇಶದ ಪ್ರಧಾನ ಸೇವಕ ನರೇಂದ್ರ ಮೋದಿಯವರು ಭಾರತ ತಂಡದ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿಗೆ ವರ್ಕ್‍ಔಟ್ ಚಾಲೆಂಜ್ ಹಾಕಿ ವಿಚಿತ್ರ ಟ್ರೆಂಡೊಂದನ್ನು ಹುಟ್ಟುಹಾಕಿದ್ದಾರೆ. ದೇಶಸೇವೆ ಮಾಡುವ ಬದಲು ದೇಹಸೇವೆ ಮಾಡಿಕೊಳ್ಳಲು ಮುಂದಾಗಿರುವ ಅವರು ಇದೀಗ ಇರಲಾರದೆ ಇರುವೆ ಬಿಟ್ಟುಕೊಂಡವರಂತೆ ರಾಷ್ಟ್ರದ ಜನರೆದುರು ಕಾಮಿಡಿ ಪೀಸ್ ಆಗ್ಬಿಟ್ಟಿದ್ದಾರೆ. ಹುಲ್ಲು, ನೀರು, ಕಾಂಕ್ರಿಟ್ ಮೇಲೆ ನಡೆಯುತ್ತಾ ಕಲ್ಲು ಬಂಡೆಯ ಮೇಲೆ ಯೋಗ ವ್ಯಾಯಾಮ ಮಾಡುತ್ತಿದ್ದ ಮೋದಿಯನ್ನು ಚುಡಾಯಿಸಲು ಮೋದಿಯನ್ನೇ ಅನುಸರಿಸಿ ಕೆಲವರು ಕಾಮಿಡಿ ವಿಡಿಯೊ ಮಾಡಿದರೆ, ಕೆಲವರು ಫೋಟೋಶಾಪ್ ಮಾಡಿ ಅವರನ್ನು ಹೀನಾಮಾನ ಅಣಕಿಸುತ್ತಿದ್ದಾರೆ. ಪ್ರಧಾನ ಸೇವಕರಿಗೆ ಇದೆಲ್ಲಾ ಬೇಕಿತ್ತಾ ಅನ್ನೋದೆ ಮಿಲಿಯನ್ ಡಾಲರ್ ಪ್ರಶ್ನೆ.

Leave a Reply

Your email address will not be published.

Social Media Auto Publish Powered By : XYZScripts.com