ಗದಗ : ಇಸ್ಪೀಟ್ ಚಟಕ್ಕೆ ಹೆಂಡ್ತಿಯ ತಾಳಿಯನ್ನೇ ಅಡವಿಟ್ಟ ಗಂಡ : ಪತಿಯ ಕೊಲೆಗೈದ ಪತ್ನಿ..!

ಗದಗ : ಇಸ್ಪೀಟ್ ಚಟಕ್ಕೆ ಹೆಂಡತಿಯ ತಾಳಿಯನ್ನೇ ಮಾರಿದ ಗಂಡ ಪತ್ನಿಯಿಂದಲೇ ಕೊಲೆಯಾಗಿರುವ ಘಟನೆ ಗದಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ನಡೆದಿದೆ. ಬಸವರಾಜ (39) ಕೊಲೆಯಾದ ದುರ್ದೈವಿಯಾಗಿದ್ದಾನೆ. ಚಿಂಚಲಿ ಗ್ರಾಮದ ಮನೆಯಲ್ಲಿ ಪತ್ನಿ ಕೊಲೆಗೈದಿದ್ದಾಳೆ.

ಗಂಡನ ಇಸ್ಪಿಟ್ ಚಟಕ್ಕೆ ಹೆಂಡತಿ ಶ್ವೇತಾ ಹಾಗೂ ಮನೆಯವರು ಬೇಸತ್ತಿದ್ದರು. ಇಸ್ಪಿಟ್ ಚಟಕ್ಕೆ ಹೆಂಡತಿ ತಾಳಿ ಅಡವಿಟ್ಟಿದ್ದ ಬಸವರಾಜ ಇದನ್ನು ಪ್ರಶ್ನಿಸಲು ಬಂದಿದ್ದ ಶ್ವೇತಾ ತವರುಮನೆಯವರು ಬಾಲೆಹೊಸರು ಗ್ರಾಮದಿಂದ ಬಂದಿದ್ದರು.

ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ತೀವ್ರ ಗಲಾಟೆ ನಡೆದು ಬಾಗಿಲು ಮುಚ್ಚಿ ಬಸವರಾಜನ ಕೊಲೆಗೈಯಲಾಗಿದೆ. ಸ್ಥಳಕ್ಕೆ ಮುಳಗುಂದ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಶ್ವೇತಾ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಗದಗ ಜಿಲ್ಲೆ ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

One thought on “ಗದಗ : ಇಸ್ಪೀಟ್ ಚಟಕ್ಕೆ ಹೆಂಡ್ತಿಯ ತಾಳಿಯನ್ನೇ ಅಡವಿಟ್ಟ ಗಂಡ : ಪತಿಯ ಕೊಲೆಗೈದ ಪತ್ನಿ..!

Leave a Reply

Your email address will not be published.

Social Media Auto Publish Powered By : XYZScripts.com