Cricket : ರೋಹಿತ್ ಶರ್ಮ ಸೆಂಚುರಿ, ಹಾರ್ದಿಕ್ ಆಲ್ರೌಂಡ್ ಆಟ : ಸರಣಿ ಗೆದ್ದ ಟೀಮ್ ಇಂಡಿಯಾ

ಬ್ರಿಸ್ಟಲ್ ನ ಕೌಂಟಿ ಮೈದಾನದಲ್ಲಿ ರವಿವಾರ ನಡೆದ ಮೂರನೇ ಟಿ-20 ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಭಾರತ 7 ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಟಿ-20 ಸರಣಿಯನ್ನು ಭಾರತ 2-1 ರಿಂದ ತನ್ನದಾಗಿಸಿಕೊಂಡಿದೆ.

ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ನಿಗದಿತ 20 ಓವರುಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 198 ರನ್ ಮೊತ್ತ ದಾಖಲಿಸಿತು. ಇಂಗ್ಲೆಂಡ್ ಪರವಾಗಿ ಆರಂಬಿಕ ಬ್ಯಾಟ್ಸಮನ್ ಗಳಾದ ಜೇಸನ್ ರಾಯ್ 67 ಹಾಗೂ ಜೋಸ್ ಬಟ್ಲರ್ 34 ರನ್ ಬಾರಿಸಿದರು. ಉತ್ತಮ ಬೌಲಿಂಗ್ ಪ್ರದರ್ಶಿಸಿದ ಹಾರ್ದಿಕ್ ಪಾಂಡ್ಯ 4 ವಿಕೆಟ್ ಕಬಳಿಸಿದರು.

Image result for england india t20 series 2018 Bristol rohith

ಗುರಿಯನ್ನು ಬೆನ್ನಟ್ಟಿದ ಭಾರತ 18.4 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 201 ರನ್ ಸೇರಿಸಿ ಗೆಲುವು ಪಡೆಯಿತು. ಆರಂಭಿಕ ಬ್ಯಾಟ್ಸಮನ್ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿದರು. 56 ಎಸೆತಗಳನ್ನು ಎದುರಿಸಿದ ರೋಹಿತ್, 11 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್ ಗಳನ್ನು ಸಿಡಿಸಿ 100 ರನ್ ಗಳಿಸಿದರು. ನಾಯಕ ವಿರಾಟ್ ಕೊಹ್ಲಿ 43 ಹಾಗೂ ಹಾರ್ದಿಕ್ ಪಾಂಡ್ಯ 33 ರನ್ ಬಾರಿಸಿ ಜಯ ತಂದುಕೊಡುವಲ್ಲಿ ನೆರವಾದರು.

 

Leave a Reply

Your email address will not be published.