ಉಡುಪಿ : ಮನೆಯ ನುಗ್ಗಿ ಮಹಿಳೆಯ ಕೊಲೆಗೈದು, ಬೈಕ್, ಚಿನ್ನ ದೋಚಿದ ದುಷ್ಕರ್ಮಿಗಳು..

ಉಡುಪಿ : ಕಾರ್ಕಳದ ಅಯ್ಯಪ್ಪನಗರದಲ್ಲಿ ಮಹಿಳೆಯ ಕೊಲೆ ನಡೆದಿದೆ. 54 ವರ್ಷದ ಮಹಿಳೆ ಪ್ಲೊರಿನ್ ಡಿಸೋಜ ಕೊಲೆಯಾಗಿದ್ದಾರೆ. ಪ್ಲೊರಿನ್ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ ಪ್ಲೊರಿನ್ ಕೃತ್ಯ ನಡೆದ ದಿನ ಮನೆಯಲ್ಲಿ ಒಂಟಿಯಾಗಿದ್ದರು. ದುಷ್ಕರ್ಮಿಗಳು ಮನೆಗೆ ನುಗ್ಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಕುತ್ತಿಗೆಯ ಭಾಗದಲ್ಲಿ ಇರಿದ ಗಾಯವಾಗಿದೆ. ಬಡ್ಡಿ ವ್ಯವಹಾರ ಮತ್ತು ಜಿಮ್ ನಡೆಸುತ್ತಿದ್ದ ಮಹಿಳೆ ಪ್ಲೊರಿನ್ ಮನೆಯಲ್ಲಿ ದ್ದ ದ್ವಿಚಕ್ರವಾಹನ ಮತ್ತು ಚಿನ್ನ ದೋಚಿದ್ದಾರೆ.

ವ್ಯಾವಹಾರಿಕ ಕಾರಣ ಕ್ಕೆ ಕೊಲೆ ನಡೆದಿರುವ ಶಂಕೆ ಮೂಡಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರ್ಕಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com