Sandalwood news : ದರ್ಶನ್‍ರ ಕಾಳಜಿಯ ಪ್ರಪಂಚ ಮತ್ತಷ್ಟು ಹಿಗ್ಗುವಂತಾದಾಗಲಿ..

ಸಿನಿಮಾ ಅಂದ್ರೆ ಬೆಳ್ಳೆತೆರೆಗೆ ಸೀಮಿತವಾದ ಕ್ಷೇತ್ರವಲ್ಲ. ಅದು ಬದುಕಿನ ಪ್ರತಿಫಲನ, ಪೀಳಿಗೆಗಳ ಪಾಠ. ಅದೆಷ್ಟೊ ಜನರ ಬದುಕನ್ನೆ ಬದಲಿಸಿದ ಹಲವಾರು ಸಿನಿಮಾಗಳು ನಿದರ್ಶನ ನಮ್ಮ ಕಣ್ಮುಂದಿದೆ. ರಾಜ್‍ಕುಮಾರ್ ತಮ್ಮ ನಟನೆಯ ಹೊರತಾಗಿಯೂ ಜನರಿಗೆ ಹತ್ತಿರವಾದದ್ದು ಅವರ ಕಾಳಜಿ, ಕಳಕಳಿ, ಮುಗ್ಧತೆಯಿಂದ. ಅವುಗಳಿಂದ ಪ್ರಭಾವಿತರಾದ ಅಪಾರ ಅಭಿಮಾನಿ ಸಮೂಹವಿದೆ.

ನಟ ತನ್ನ ಪಾತ್ರಗಳನ್ನೂ ಮೀರಿ ಬೆಳೆಯುವ ಸಾಧ್ಯತೆಯನ್ನು ರಾಜ್, ವಿಷ್ಣು, ಶಂಕರ್‍ನಾಗ್‍ರಂತಹ ದಿಗ್ಗಜರು ತೋರಿಸಿಕೊಟ್ಟು ಹೋಗಿದ್ದಾರೆ. ಆದರೆ ಈಗಿನ ನಟರಲ್ಲಿ ಅಂತದ್ದನ್ನು ಕಾಣೋದೆ ಅಪರೂಪವಾಗಿದೆ. ಇವತ್ತಿನ ದಿನಗಳಲ್ಲಿ ಯಶೋಗಾಥೆ, ಪ್ರಕಾಶ್‍ರಾಜ್ ಫೌಂಡೇಷನ್‍ನಂತಹ ಜನರಿಗೆ ಉಪಕಾರಿಯಾಗುವಂತಹ, ಜನಪರವಾಗಿ ಮಾತನಾಡುವ, ಜನರ ಹೋರಾಟಗಳಲ್ಲಿ ಭಾಗಿಯಾಗುವ ಹಲವು ಸ್ಯಾಂಡಲ್‍ವುಡ್‍ನ ಹೀರೋಗಳ ಮಧ್ಯೆ ತನ್ನ ಸ್ನೇಹಿತರ ಬಳಗಕ್ಕೆ ಒಂದಲ್ಲ ಒಂದು ರೀತಿಯಲ್ಲಿ ನೆರವು ನೀಡುತ್ತಾ ಬಂದಿರುವ ದರ್ಶನ್, ಸಿನಿಮಾಗಳಲ್ಲಿ ಅವಕಾಶ ಸಿಗದೆ ಜೀವನಕ್ಕಾಗಿ ಟ್ಯಾಕ್ಸಿ ಡ್ರೈವಿಂಗ್ ಮಾಡುತ್ತಿದ್ದ ಹಿರಿಯ ನಟ ಅಶ್ವಥ್ ಅವರ ಮಗ ಶಂಕರ್ ಅಶ್ವಥ್‍ಗೆ ಪಿ.ಕುಮಾರ್ ಆಕ್ಷನ್ ಕಟ್ ಹೇಳುತ್ತಿರುವ ತನ್ನ ಯಜಮಾನ ಸಿನಿಮಾದಲ್ಲಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

ತನಗೆ ಅವಕಾಶ ಕಲ್ಪಿಸಿಕೊಟ್ಟ ದರ್ಶನ್‍ರನ್ನ ಶಂಕರ್ ಚಿತ್ರರಂಗದ ದಿಗ್ವಿಜಯರಾದ ರಾಜ್, ವಿಷ್ಣುರ ಸಾಲಿಗೆ ಸೇರಿಸಿ ಹೊಗಳಿದ್ದಾರೆ. ನಟರಾದವರಿಗೆ ನಿಜಕ್ಕೂ ತಮ್ಮ ಸುತ್ತಲಿನ ಪ್ರಪಂಚದ ಬಗ್ಗೆ ಇಂತಹ ಕಾಳಜಿ ಇರಬೇಕು. ಆದರೆ ಆ ಸುತ್ತಲಿನ ಪ್ರಪಂಚ ಕೇವಲ ತಮ್ಮ ಬಂಧು, ಸ್ನೇಹಿತರು, ಪಾಲುದಾರರಿಗೆ ಮಾತ್ರ ಸೀಮಿತವಾದರೆ ಅದರಿಂದ ಹೆಚ್ಚೇನು ಲಾಭವಿಲ್ಲ. ದರ್ಶನ್‍ರ ಈ ಕಾಳಜಿಯ ಪ್ರಪಂಚ ಮತ್ತಷ್ಟು ಹಿಗ್ಗುವಂತಾದಾಗ ಅವರು ನಿಜಕ್ಕೂ ಮಹನೀಯರ ಸಾಲಿನಲ್ಲಿ ನಿಲ್ಲಲು ಅರ್ಹರೆನಿಸುತ್ತಾರೆ. ಹಾಗಾಗಲಿ ಎಂಬುದೇ ನಮ್ಮ ಹಾರೈಕೆ.

4 thoughts on “Sandalwood news : ದರ್ಶನ್‍ರ ಕಾಳಜಿಯ ಪ್ರಪಂಚ ಮತ್ತಷ್ಟು ಹಿಗ್ಗುವಂತಾದಾಗಲಿ..

Leave a Reply

Your email address will not be published.

Social Media Auto Publish Powered By : XYZScripts.com