46ನೇ ವಸಂತಕ್ಕೆ ಕಾಲಿಟ್ಟ ಸೌರವ್ ಗಂಗೂಲಿ : ದಾದಾ ಹುಟ್ಟುಹಬ್ಬಕ್ಕೆ ವೀರೂ Special ಶುಭಾಶಯ

ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ‘ಪ್ರಿನ್ಸ್ ಆಫ್ ಕೋಲ್ಕತಾ’ ಎಂದೇ ಖ್ಯಾತಿಯಾದ ಸೌರವ್ ಗಂಗೂಲಿ ಶನಿವಾರ 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಆಕ್ರಮಣಕಾರಿ ಶೈಲಿಯ ನಾಯಕತ್ವದ ಮೂಲಕ ಭಾರತೀಯ ಕ್ರಿಕೆಟ್ ತಂಡವನ್ನು ಯಶಸ್ಸಿನತ್ತ ಕೊಂಡೊಯ್ದ ಖ್ಯಾತಿ ಸೌರವ್ ಅವರದ್ದಾಗಿದೆ. ಆಫ್ ಸೈಡ್ ನಲ್ಲಿ ಅದ್ಭುತ ಹೊಡೆತಗಳನ್ನು ಬಾರಿಸುತ್ತಿದ್ದ ಎಡಗೈ ಬ್ಯಾಟ್ಸಮನ್ ಗಂಗೂಲಿ ಅವರನ್ನು ‘ಗಾಡ್ ಆಫ್ ಆಫ್ ಸೈಡ್’ ಎಂದು ಕರೆಯಲಾಗುತ್ತಿತ್ತು. ದಾದಾ ನೇತೃತ್ವದ ಭಾರತ ತಂಡ 2003ರ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ವರೆಗೆ ತಲುಪಿತ್ತು.

ನಜಾಫ್ ಗಢಧ ಸಚಿನ್ ಎಂದೇ ಖ್ಯಾತಿಯಾದ, ಟೀಮ್ ಇಂಡಿಯಾದ ಮಾಜಿ ಆರಂಭಿಕ ಬ್ಯಾಟ್ಸಮನ್ ವೀರೇಂದ್ರ ಸೆಹ್ವಾಗ್ ಸಾಮಾಜಿ ಜಾಲತಾಣದಲ್ಲಿ ಟ್ವೀಟ್ ಮಾಡುವ ಮೂಲಕ ದಾದಾಗೆ ವಿಶೇಷವಾಗಿ ಶುಭಾಶಯ ಕೋರಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com