BJP ಯವರು, ಮೋದಿ ಹೆಸರಲ್ಲಿ ಕತ್ತೆಗೆ ಟಿಕೆಟ್ ಕೊಟ್ಟರೂ ಗೆಲ್ಲುತ್ತೆ ಅನ್ಕೊಂಡಿದಾರೆ : ಎಸ್.ಕೆ ಬೆಳ್ಳುಬ್ಬಿ

ಬಾಗಲಕೋಟೆಯಲ್ಲಿ ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಹೇಳಿಕೆ ನೀಡಿದ್ದಾರೆ. ‘ ಗ್ರಾಪಂ ನಲ್ಲಿ ಆಯ್ಕೆಯಾದವನಿಗೆ ಟಿಕೆಟ್ ಕೊಟ್ಟರು. ಆದ್ದರಿಂದ ನಾನು ಬಿಜೆಪಿ ಪಕ್ಷ ತೊರೆದೆ. ಮೋದಿ ಹೆಸರ ಮೇಲೆ ಕತ್ತೆಗೂ ಟಿಕೆಟ್ ಕೊಟ್ಟರೆ ಆಯ್ಕೆಯಾಗುತ್ತಾರೆ ಅಂತ ತಿಳಿದುಕೊಂಡಿದ್ದಾರೆ ‘ ಎಂದು ಹೇಳಿದ್ದಾರೆ.

‘ ರಾಮಮಂದಿರ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದೀರಿ. ಯುವಕರನ್ನು ಬಲಿ ಕೊಟ್ರಿ, ಬ್ರಾಹ್ಮಣ ಕುಟುಂಬದವರನ್ನು ಸತ್ಯಾನಾಶ ಮಾಡಿದ್ರಿ, ನಿಮ್ ಹತ್ತಿರ ದಮ್ ಇದ್ರೆ ರಾಮಮಂದಿರಕ್ಕೆ ಪಾಯಾ(ಬುನಾದಿ) ಹಾಕಿ, ಪಾಯಾ(ಬುನಾದಿ) ಹಾಕಿ ಎಮ್ ಪಿ ಚುನಾವಣೆ ಮಾಡಿ ‘ ಎಂದು ನರೇಂದ್ರ ಮೋದಿಗೆ ಬೆಳ್ಳುಬ್ಬಿ ಸವಾಲ್ ಹಾಕಿದ್ದಾರೆ.

‘ ಕಳೆದ ವರ್ಷ ಗೋವಿನ ಜೋಳ ಬೆಲೆ ಹೆಚ್ಚು ಮಾಡಲು ನಿಮಗೇನು ದಾಡಿಯಾಗಿತ್ತು ಮೋದಿ ಸಾಹೇಬರೆ ಎಲ್ಲಾ ಬೋಗಸ್ ಸುಮ್ಮನೆ ಯುವಕರು ಮೋದಿ‌ಮೋದಿ ಅಂತ ಉಸಿರು ಬಿಟ್ಟರು. ಬಾಗಲಕೋಟೆ ಎಮ್ ಪಿ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ. ಗೆದ್ದೇ ಗೆಲ್ಲುತ್ತೇನೆ ಎಂದಿದ್ದಾರೆ. ಮಾತು ಮತ್ತು ಕೃತಿ ರಾಜಕೀಯದಲ್ಲಿ ಬಹಳ ಕಡಿಮೆ ‘ ಎಂದು ಜೆಡಿಎಸ್ ನೂತನ‌ ಜಿಲ್ಲಾಧ್ಯಕ್ಷ ಪದಗ್ರಹ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com