FIFA 2018 : ಸೆಮಿಫೈನಲ್ ಪ್ರವೇಶಿಸಿದ ಕ್ರೊವೇಶಿಯಾ : ಆತಿಥೇಯ ರಷ್ಯಾ ಸವಾಲು ಅಂತ್ಯ

ಫಿಶ್ತ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಷ್ಯಾ ವಿರುದ್ಧ ರೋಚಕ ಗೆಲುವು ಸಾಧಿಸಿದ ಕ್ರೊವೇಶಿಯಾ ಫಿಫಾ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದೆ. ಇದರೊಂದಿಗೆ ವಿಶ್ವಕಪ್ ಟೂರ್ನಿಯ ಆತಿಥ್ಯ ವಹಿಸಿರುವ ರಷ್ಯಾ ತಂಡದ ಸವಾಲು ಅಂತ್ಯಗೊಂಡಿದೆ.

90 ನಿಮಿಷಗಳ ಅವಧಿ ಪೂರ್ಣಗೊಂಡಾಗ ಉಭಯ ತಂಡಗಳ ಸ್ಕೋರ್ 1-1 ರಿಂದ ಸಮವಾಗಿತ್ತು. ಹೆಚ್ಚುವರಿ 30 ನಿಮಿಷದ ಆಟ ಮುಕ್ತಾಯಗೊಂಡಾಗಲೂ ಇತ್ತಂಡಗಳು 2-2 ರಿಂದ ಸಮಬಲ ಸಾಧಿಸಿದ್ದವು. ಬಳಿಕ ನಡೆದ ಪೆನಾಲ್ಟಿ ಶೂಟೌಟ್ ನಲ್ಲಿ ಮೇಲುಗೈ ಸಾಧಿಸಿದ ಕ್ರೊವೇಶಿಯಾ 3-4 ಗೋಲುಗಳ ಅಂತರದಿಂದ ಜಯ ಗಳಿಸಿತು.

ಜೂನ್ 11ರಂದು ಬುಧವಾರ ಲುಝ್ನಿಕಿ ಕ್ರೀಡಾಂಗಣದಲ್ಲಿ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ರಷ್ಯಾ ಹಾಗೂ ಕ್ರೊವೇಶಿಯಾ ತಂಡಗಳು ಮುಖಾಮುಖಿಯಾಗಲಿವೆ.

 

Leave a Reply

Your email address will not be published.

Social Media Auto Publish Powered By : XYZScripts.com