‘ಡೊಳ್ಳು ಹೊಟ್ಟೆ’ ಪೊಲೀಸರೆ ಎಚ್ಚರ : ಸುತ್ತೋಲೆ ಹೊರಡಿಸಿದ ಕೆಎಸ್‌ಆರ್’ಪಿ ಎಡಿಜಿಪಿ ಭಾಸ್ಕರ್ ರಾವ್..

ಡೊಳ್ಳು ಹೊಟ್ಟೆಯಿಂದ ಪೋಲಿಸ್ ಇಲಾಖೆಗೆ ಮುಜುಗರವಾಗುತ್ತಿರುವ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೆಎಸ್‌ಆರ್‍ ಪಿ ಎಡಿಜಿಪಿ ಭಾಸ್ಕರ್ ರಾವ್ ಪೋಲಿಸರಿಗೆ ಹೊಟ್ಟೆ ಕರಗಿಸಿಕೊಳ್ಳುವ ಬಗ್ಗೆ ಜುಲೈ ೩ರಂದು ಸುತ್ತೋಲೆಯನ್ನು ಹೊರಡಿಸಿದ್ದಾರೆ ಎನ್ನಲಾಗಿದೆ.


ಡೊಳ್ಳು ಹೊಟ್ಟೆಯಿರುವ ಪೋಲಿಸರು ದೈಹಿಕವಾಗಿ ಸಧೃಡರನ್ನಾಗಿ ಮಾಡುವ ದೃಷ್ಠಿಯಿಂದ, ಹಾಗೂ ಆರೋಗ್ಯದಿಂದ ಇರುವ ಸಲುವಾಗಿ ಕೆಎಸ್‌ಆರ್‍ ಪಿ ಎಡಿಜಿಪಿ ಭಾಸ್ಕರ್ ರಾವ್ ಅವರು ರಾಜ್ಯದಲ್ಲಿರುವ ಕೆಎಸ್‌ಆರ್‍ ಪಿ 12 ವಿಭಾಗಗಳಿಗೆ ಸುತ್ತೋಲೆಯನ್ನು ಹೊರಡಿಸಿದ್ದು ಕಡ್ಡವಾಗಿ ಡೊಳ್ಳುಹೊಟ್ಟೆಯಿಂದ ಬಳಲುತ್ತಿರುವ ಪೋಲಿಸರು ತಮ್ಮ ಹೊಟ್ಟೆಯನ್ನು ಕರಗಿಸಿಕೊಂಡು ದೈಹಿಕ ಆರೋಗ್ಯವನ್ನು ಕಾಪಾಡುವಂತೆ ನಿರ್ದೇಶನ ನೀಡಿದ್ದಾರೆ..

ಒಂದು ವೇಳೆ ಕೆಎಸ್‌ಆರ್‍ ಪಿ ಪೋಲಿಸರು ತಮ್ಮ ಡೊಳ್ಳು ಹೊಟ್ಟೆಯನ್ನು ಕರಗಿಸಿಕೊಳ್ಳುವುದಕ್ಕೆ ಮುಂದಾಗದೇ ಹೋದರೆ ಅದರ ಹೊಣೆಯನ್ನು ಆಯಾ ಕಮಾಂಡೇಟ್ ಗಳು ಹೊರಬೇಕಾಗುತ್ತದೆ ಅಂತ ಎಡಿಜಿಪಿ ಭಾಸ್ಕರ್ ರಾವ್ ಮೌಖಿಕ ನಿರ್ದೇಶನ ನೀಡಿದ್ದಾರೆ….

Leave a Reply

Your email address will not be published.

Social Media Auto Publish Powered By : XYZScripts.com