ಕನ್ನಡಕ್ಕೆ ಬರುತ್ತದ್ದಾಳೆ ಶ್ರೀಲಂಕಾ ಸುಂದರಿ : ಜಾಕ್ವೆಲಿನ್ ಜತೆ ಹೆಜ್ಜೆ ಹಾಕಲು ಜಾಗ್ವಾರ ರೆಡಿ….!

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ನಾಯಕನಟನಾಗಿ ಅಭಿನಯಿಸುತ್ತಿರುವ ಸೀತಾರಾಮ ಕಲ್ಯಾಣ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.  ಜೊತಗೆ ಹೊಸ ಹೊಸ ತಾರೆಯರ ಎಂಟ್ರಿ ಕೂಡಾ ಸಾಗಿದೆ, ಅದಕ್ಕೆ ಹೊಸ ಸೆರ್ಪಡೆ ಜಾಕ್ವೆಲಿನ್ ಫರ್ನಾಂಡಿಸ್… ವಿಷಯ ಏನೆಂದರೆ ಚಿತ್ರದ ಒಂದು ಹಾಡಿಗೆ ಹೆಜ್ಜೆ ಹಾಕಲು ಶ್ರೀಲಂಕಾ ಸುಂದರಿ ಬಾಲಿವುಡ್ ನ ಜಾಕ್ವೆಲಿನ್ ಫರ್ನಾಂಡಿಸ್ ಬರುತ್ತಿದ್ದಾರೆ…

ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದು,. ನಿರ್ದೇಶಕ ಎ ಹರ್ಷ ಆಕ್ಷನ್ ಕಟ್ ಹೇಳುತ್ತಿದ್ದಾರೆ. . ಶರತ್ ಕುಮಾರ್, ರವಿಶಂಕರ್. ಹಾಗೂ ಆದಿತ್ಯ ಮೆನನ್ ಕೂಡ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರದ ಐಟಂ ಸಾಂಗ್ ನಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಸೊಂಟ ಬಳುಕಿಸಲಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ.

ಸೀತಾರಾಮ ಕಲ್ಯಾಣ ಚಿತ್ರದ ಐಟಂ ಸಾಂಗ್ ವೊಂದಕ್ಕೆ ತಮನ್ನಾ ಅವರನ್ನು ಕರೆತರಲು ಚಿತ್ರತಂಡ ನಿರ್ಧರಿಸಿದ್ದಾರೆ ಎನ್ನಲಾಗಿತ್ತು. ಇದೀಗ ನಟಿ ಜಾಕ್ವೆಲಿನ್ ಅವರನ್ನು ಕೂಡ ಚಿತ್ರತಂಡ ಸಂಪರ್ಕಿಸಿದ್ದು. ಇಷ್ಟರಲ್ಲೇ ಗ್ರೀನ್ ಸಿಗ್ನಲ್ ಸಿಗುವ ನಿರೀಕ್ಷೆಯಿದೆ.

Leave a Reply

Your email address will not be published.

Social Media Auto Publish Powered By : XYZScripts.com