ರೈತರ ಸಾಲಮನ್ನಾ ವಿಚಾರದಲ್ಲಿ HDK ಮತ್ತೊಮ್ಮೆ ವಚನಭ್ರಷ್ಟರಾಗಿದ್ದಾರೆ : ರೇಣುಕಾಚಾರ್ಯ

ದಾವಣಗೆರೆ : ‘ ಬಜೆಟ್ ನಲ್ಲಿ ಮಧ್ಯ ಕರ್ನಾಟಕವನ್ನ ಕಡೆಗಣಿಸಲಾಗಿದೆ ‘ ಎಂದು ದಾವಣಗೆರೆಯಲ್ಲಿ ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ. ‘ ಜುಲೈ 12ರ ಒಳಗೆ ಮುಖ್ಯಮಂತ್ರಿ ಗಳು ಮಧ್ಯ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು. ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕ ಕರ್ನಾಟಕದ ಕೂಗು ಎದ್ದಿದೆ, ಮಧ್ಯ ಕರ್ನಾಟಕದಲ್ಲಿ ಕೂಡ ಪ್ರತ್ಯೇಕ ಕರ್ನಾಟಕ ಕೂಗು ಬರುವ ಸಾಧ್ಯತೆ ಇದೆ. ಆದರೆ ನಾವು ರಾಜ್ಯ ಒಡೆಯುವ ಕೆಲಸಕ್ಕೆ ಕೈ ಹಾಕುವುದಿಲ್ಲ ‘ ಎಂದಿದ್ದಾರೆ.

‘ ಸಮ್ಮಿಶ್ರ ಸರ್ಕಾರದಲ್ಲಿ ನೆಲಬಾಂಬುಗಳು ಇವೆ ಅವು ಯಾವಾಗ ಬೇಕಾದರು ಸ್ಫೊಟಗೊಳ್ಳಬಹುದು. ಸಮ್ಮಿಶ್ರ ಸರ್ಕಾರದ ಮೇಲೆ ಅನೇಕ ಶಾಸಕರಿಗೆ ವಿಶ್ವಾಸವಿಲ್ಲ. ದಿಕ್ಕು ದೇಸೆ ಇಲ್ಲದ ಬಜೆಟ್, ಸರ್ಕಾರದ ಬಜೆಟ್ ಕೇವಲ ನಾಲ್ಕು ಜಿಲ್ಲೆಗೆ ಮಾತ್ರ. ರೈತರ ಸಾಲಮನ್ನಾ ವಿಚಾರದಲ್ಲಿ
ಎರಡನೇ ಬಾರಿ ಕುಮಾರಸ್ವಾಮಿ ವಚನ ಭ್ದಷ್ಟರಾಗಿದ್ದಾರೆ. ಸಿಎಂ ಕುಮಾರಸ್ವಾಮಿ ಗೆ ರಾಜಕೀಯ ಬದ್ದತೆ ಹಾಗೂ ಶಕ್ತಿ ಇಲ್ಲ. ಸಮ್ಮಿಶ್ರ ಸರ್ಕಾರ ತುಂಬಾದಿನ ಉಳಿಯುವುದಿಲ್ಲ. ಕುಮಾರಸ್ವಾಮಿ ನಾಮಕಾವಸ್ಥೆ ಸಿಎಂ, ಹೆಚ್ ಡಿ ರೇವಣ್ಣ ಸುಪರ್ ಸಿಎಂ ಆಗಿದ್ದಾರೆ. ಸರ್ಕಾರದ ಎಲ್ಲಾ ಕಾರ್ಯಗಳು ದೇವೆಗೌಡರ ಮನೆಯಲ್ಲಿ ನಡೆಯುತ್ತಿದೆ ‘ ಎಂದು ಆರೋಪಿಸಿದ್ದಾರೆ.

ಜಮೀರ್ ಆಹ್ಮದ್ ಕುಮಾರಸ್ವಾಮಿ ಸಿಎಂ ಆದ್ರೆ ಕತ್ತು ಕೊಯ್ದುಕೊಳ್ಳುತ್ತೆನೆ ಎಂದಿದ್ದರು, ಆದರೆ ಅವರೆಲ್ಲಾ ಇಂದು ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಿದ್ದಾರೆ. ಕುಮಾರಸ್ವಾಮಿಗೆ ಯಾವುದೇ ನೈತಿಕ ಹಕ್ಕು ಇಲ್ಲ. ಮಧ್ಯ ಕರ್ನಾಟಕವನ್ನ ಬಜೆಟ್ ನಲ್ಲಿ ಕಡೆಗಣಿಸಿದ್ದಾರೆ ಇದರಿಂದ ಬಿಜೆಪಿ ಸುಮ್ಮನಿರಲ್ಲ ಹೋರಾಟ ಮಾಡುತ್ತೇವೆ. ಹೆಚ್ ಕೆ ಪಾಟೀಲ್ ನಂತ ಹಿರಿಯರು ಬಜೆಟ್ ಬಗ್ಗೆ ಸಿಡಿದೆದ್ದಿದ್ದಾರೆ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com