FIFA 2018 : ಸೆಮಿಫೈನಲ್ ತಲುಪಿದ ಇಂಗ್ಲೆಂಡ್ : ಸೋತು ಹೊರನಡೆದ ಸ್ವೀಡನ್

ಸಮಾರಾ ಅರೆನಾದಲ್ಲಿ ಶನಿವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ವೀಡನ್ ವಿರುದ್ಧ 2-0 ಗೋಲ್ ಅಂತರದಿಂಧ ಗೆಲುವು ಸಾಧಿಸಿದ ಇಂಗ್ಲೆಂಡ್ ಫಿಫಾ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದೆ. ಹ್ಯಾರಿ ಕೇನ್ ನೇತೃತ್ವದ ಇಂಗ್ಲೆಂಡ್ ತಂಡದೆದುರು ಶರಣಾದ ಸ್ವೀಡನ್ ಪ್ರಸಕ್ತ ವಿಶ್ವಕಪ್ ಟೂರ್ನಿಯಿಂದ ನಿರ್ಗಮಿಸಿದೆ.

ಇಂಗ್ಲೆಂಡ್ ಪರವಾಗಿ ಡಿಫೆಂಡರ್ ಹ್ಯಾರಿ ಮ್ಯಾಗ್ಯುರ್ 30ನೇ ನಿಮಿಷದಲ್ಲಿ ಮೊದಲ ಗೋಲ್ ದಾಖಲಿಸಿ ಮುನ್ನಡೆ ಒದಗಿಸಿದರು. ಬಳಿಕ ಮಿಡ್ ಫೀಲ್ಡರ್ ಡೆಲೆ ಆ್ಯಲಿ ದ್ವಿತೀಯಾರ್ಧದ 58ನೇ ನಿಮಿಷದಲ್ಲಿ ಗೋಲ್ ಬಾರಿಸಿ ಗೆಲುವಿನ ಅಂತರವನ್ನು ಹೆಚ್ಚಿಸಿದರು.

ಜುಲೈ 11ರಂದು ಬುಧವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್, ಕ್ರೊವೇಶಿಯಾ ತಂಡವನ್ನು ಎದುರಿಸಲಿದೆ.

Leave a Reply

Your email address will not be published.

Social Media Auto Publish Powered By : XYZScripts.com