ಯಾವುದೇ ಕ್ಷಣದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗುವ ಸಾಧ್ಯತೆಯಿದೆ : ಡಿ.ವಿ ಸದಾನಂದ ಗೌಡ

ಮಂಗಳೂರಿನಲ್ಲಿ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಹೇಳಿಕೆ ನೀಡಿದ್ದಾರೆ. ‘ ರಾಜ್ಯದಲ್ಲಿ ಯಾವುದೇ ಕ್ಷಣದಲ್ಲಿ ಸಮ್ಮಿಶ್ರ ಸರಕಾರ ಪತನ ಆಗೋ ಸಾಧ್ಯತೆ ಇದೆ. ಕುರ್ಚಿಗಾಗಿ ಕಚ್ಚಾಟದಿಂದಾಗಿ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತಗೊಂಡಿದೆ. ಸರಕಾರ ಯಾವಾಗ ಹೋಗುತ್ತದೆ ಎಂದು ಜನರು ಕಾಯುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡು ಪಕ್ಷಗಳು ತಮ್ಮ ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿವೆ ‘ ಎಂದಿದ್ದಾರೆ.

‘ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಅಧಿಕಾರಿಗಳ ಮೇಲೆ ಹಿಡಿತವಿಲ್ಲ .ಅಧಿಕಾರಿಗಳು ತಮಗೆ ಇಷ್ಟ ಬಂದಂತೆ ಆಡಳಿತ ನಡೆಸುತ್ತಿದ್ದಾರೆ
ಈ ಸರಕಾರ ಹೆಚ್ಚು ಬಾಳುವುದಿಲ್ಲ . ರಾಜ್ಯದಲ್ಲಿ ಇಷ್ಟು ಮಳೆಯಾಗುತ್ತಿದ್ದರು ಕೂಡ ಇನ್ನು ಕೂಡ ಸರಕಾರ ಸಭೆ ನಡೆಸಿಲ್ಲ.ಯಾವುದೇ ಪರಿಹಾರ ನೀಡಿಲ್ಲ.
ಜನರು ನೀರಿನಲ್ಲಿ ಮುಳುಗುತಿದ್ದಾರೆ ಆದ್ರೂ ಇವರಿಗೆ ಕ್ಯಾರೇ ಇಲ್ಲ. ಇವರಿಗೆ ಇವರು ನಾಳೆ ಮುಳುಗಿ ಹೋಗುತ್ತಾರೆ ಎಂದು ಗೊತ್ತಿದೆ .
ಅದಕ್ಕೆ ಇವರು ಎಂದು ಮಾಡುವುದಿಲ್ಲ ‘ ಎಂದು ಹೇಳಿದರು.

‘ ದೇಶದಲ್ಲಿ ತೃತೀಯ ರಂಗ ಹರಿದ ಬಟ್ಟೆಯ ಹಾಗೆ ಆಗಿದೆ. ಒಬ್ಬರನ್ನು ನೋಡಿದರೆ ಒಬ್ಬರಿಗೆ ಆಗುವುದಿಲ್ಲ. ಮಾಯಾವತಿ ಕಾಂಗ್ರೆಸ್ ಒಟ್ಟಿಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಮೋದಿಯನ್ನು ಮಣಿಸಲು ಯಾರಿಂದಲೂ ಸಾಧ್ಯವಿಲ್ಲ ‘ ಎಂದಿದ್ದಾರೆ.

One thought on “ಯಾವುದೇ ಕ್ಷಣದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗುವ ಸಾಧ್ಯತೆಯಿದೆ : ಡಿ.ವಿ ಸದಾನಂದ ಗೌಡ

Leave a Reply

Your email address will not be published.

Social Media Auto Publish Powered By : XYZScripts.com