ತುಮಕೂರು : KSRTC ಬಸ್ ಗಳ ನಡುವೆ ಡಿಕ್ಕಿ : ಓರ್ವನ ಸಾವು, 8 ಪ್ರಯಾಣಿಕರಿಗೆ ಗಾಯ

ತುಮಕೂರು : ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳ ನಡುವೆ ಡಿಕ್ಕಿಯಾದ ಪರಿಣಾಮ ಒರ್ವ ವ್ಯಕ್ತಿ ಸಾವನ್ನಪ್ಪಿದ್ದು, 8 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ತುಮಕೂರು ಹೊರವಲಯದ ಅಂತರಸಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರ್ಘಟನೆ ನಡೆದಿದೆ.

ಬಾಗಲಕೋಟೆ, ಗದಗ ಕಡೆಯಿಂದ ಬೆಂಗಳೂರಿಗೆ ಬಸ್‌ಗಳು ತೆರಳುತ್ತಿದ್ದವು. ಓವರ್ ಟೇಕ್ ಮಾಡಲು ಹೋದಾಗ ಹಿಂಬದಿಯಿಂದ ಬಸ್ ಡಿಕ್ಕಿ ಹೊಡೆದಿದೆ. ಗಾಯಾಳುಗಳು ತುಮಕೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಸುಮಾರು ನಾಲ್ಕು ಕಿ.ಮೀ ವರೆಗೆ ರಾ.ಹೆದ್ದಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪಶ್ಚಿಮ ವಲಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com