FIFA 2018 : ಸೆಮಿಫೈನಲ್ ಪ್ರವೇಶಿಸಿದ ಫ್ರಾನ್ಸ್ : ಟೂರ್ನಿಯಿಂದ ಹೊರನಡೆದ ಉರುಗ್ವೆ

ನಿಝ್ನಿ ನೊವ್ಗೊರೊಡ್ ಕ್ರೀಡಾಂಗಣದದಲ್ಲಿ ಶುಕ್ರವಾರ ನಡೆದ ಫಿಫಾ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉರುಗ್ವೆ ವಿರುದ್ಧ 2-0 ಗೋಲ್ ಅಂತರದ ಜಯ ಗಳಿಸಿದ ಫ್ರಾನ್ಸ್ ಸೆಮಿಫೈನಲ್ ಪ್ರವೇಶಿಸಿದೆ. 3ನೇ ಬಾರಿಗೆ ಟ್ರೋಫಿ ಪ್ರಶಸ್ತಿ ಎತ್ತಿ ಹಿಡಿಯುವ ಕನಸಿನಲ್ಲಿದ್ದ ಉರುಗ್ವೆ ಸೋತು ನಿರ್ಗಮಿಸಿದೆ.

ಫ್ರಾನ್ಸ್ ಪರವಾಗಿ 40ನೇ ನಿಮಿಷದಲ್ಲಿ ರಫಾಯಿಲ್ ವೆರೆನ್ ಹಾಗೂ 60ನೇ ನಿಮಿಷದಲ್ಲಿ ಆ್ಯಂಟೋನಿ ಗ್ರೀಜ್ಮನ್ ಗೋಲ್ ದಾಖಲಿಸಿದರು. ಫ್ರಾನ್ಸ್ ನ ಅತ್ಯುತ್ತಮ ರಕ್ಷಣಾ ವಿಭಾಗವನ್ನು ಭೇಧಿಸುವಲ್ಲಿ ವಿಫಲವಾರದ ಉರುಗ್ವೆ ತಂಡದಿಂದ ಯಾವುದೇ ಗೋಲ್ ದಾಖಲಾಗಲಿಲ್ಲ.

ಜುಲೈ 10ರಂದು ಮಂಗಳವಾರ ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್, ಬೆಲ್ಜಿಯಂ ತಂಡವನ್ನು ಎದುರಿಸಲಿದೆ. 1998ರಲ್ಲಿ ಚಾಂಪಿಯನ್ ಆಗಿದ್ದ ಫ್ರಾನ್ಸ್ ಎರಡನೇ ಬಾರಿ ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿದೆ.

 

One thought on “FIFA 2018 : ಸೆಮಿಫೈನಲ್ ಪ್ರವೇಶಿಸಿದ ಫ್ರಾನ್ಸ್ : ಟೂರ್ನಿಯಿಂದ ಹೊರನಡೆದ ಉರುಗ್ವೆ

Leave a Reply

Your email address will not be published.

Social Media Auto Publish Powered By : XYZScripts.com