Cricket : ಭಾರತಕ್ಕೆ ಆತಿಥೇಯರ ತಿರುಗೇಟು : 2ನೇ T20ಯಲ್ಲಿ ಇಂಗ್ಲೆಂಡ್‍ಗೆ 5 ವಿಕೆಟ್ ಜಯ

ಶುಕ್ರವಾರ ಕಾರ್ಡಿಫ್ ನ ಸೋಫಿಯಾ ಗಾರ್ಡನ್ ಮೈದಾನದಲ್ಲಿ ನಡೆದ 2ನೇ ಟಿ-20 ಪಂದ್ಯದಲ್ಲಿ ಭಾರತದ ವಿರುದ್ಧ ಆತಿಥೇಯ ಇಂಗ್ಲೆಂಡ್ 5 ವಿಕೆಟ್ ಗೆಲುವು ಗಳಿಸಿದೆ. ಮೊದಲ ಪಂದ್ಯದ ಸೋಲಿಗೆ ತಿರುಗೇಟು ನೀಡಿರುವ ಇಂಗ್ಲೆಂಡ್ 3 ಪಂದ್ಯಗಳ ಟಿ-20 ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿದೆ.

ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಭಾರತ 20 ಓವರುಗಳಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಮೊತ್ತ ಕಲೆಹಾಕಿತು. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 47 ಹಾಗೂ ಮಹೇಂದ್ರ ಸಿಂಗ್ ಧೋನಿ ಅಜೇಯ 32 ರನ್ ಸೇರಿಸಿ ನೆರವಾದರು.

ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ 19.4 ಓವರುಗಳಲ್ಲಿ 5 ವಿಕೆಟ್ ಕಳೆದುಕೊಂಡು 149 ರನ್ ಗಳಿಸಿ ಗೆಲುವಿನ ದಡ ಸೇರಿತು. ಇಂಗ್ಲೆಂಡ್ ಪರವಾಗಿ ಅರ್ಧಶತಕ ಬಾರಿಸಿದ ಅಲೆಕ್ಸ್ ಹೇಲ್ಸ್ ಅಜೇಯ 58 ಹಾಗೂ ಜಾನಿ ಬೇರ್ಸ್ಟೊವ್ 28 ರನ್ ಗಳಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com