FIFA 2018 : ಸೆಮಿ ಫೈನಲ್‍ಗೆ ಲಗ್ಗೆಯಿಟ್ಟ ಬೆಲ್ಜಿಯಂ : ಬ್ರೆಜಿಲ್ ಕನಸು ಭಗ್ನ..

ಕಜಾನ್ ಅರೆನಾ ಮೈದಾನದಲ್ಲಿ ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬ್ರೆಜಿಲ್ ತಂಡವನ್ನು 1-2 ಗೋಲ್ ಅಂತರದಿಂದ ಮಣಿಸಿದ ಬೆಲ್ಜಿಯಂ ಫಿಫಾ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದೆ. 5 ಬಾರಿಯ ವಿಶ್ವ ಚಾಂಪಿಯನ್ ಬ್ರೆಜಿಲ್ ಸೋತು ನಿರ್ಗಮಿಸಿದ್ದು, 6ನೇ ಸಲ ಟ್ರೋಫಿ ಗೆಲ್ಲುವ ಕನಸು ಭಗ್ನಗೊಂಡಿದೆ.

ಮೊದಲಾರ್ಧದ 13ನೇ ನಿಮಿಷದಲ್ಲಿ ಬ್ರೆಜಿಲ್ ತಂಡದ ಫರ್ನಾಂಡಿನ್ಹೊ ತಮ್ಮದೇ ಗೋಲ್ ಪೆಟ್ಟಿಗೆಯೊಳಗೆ (Own Goal) ಚೆಂಡನ್ನು ಸೇರಿಸಿ ಬೆಲ್ಜಿಯಂಗೆ ಮುನ್ನಡೆ ಒದಗಿಸಿಕೊಟ್ಟರು.  31ನೇ ನಿಮಿಷದಲ್ಲಿ ಬೆಲ್ಜಿಯಂನ ಕೆವಿನ್ ಡಿ ಬ್ರುಯೆನ್ ಗೋಲ್ ಬಾರಿಸಿದರು. ಬ್ರೆಜಿಲ್ ಪರವಾಗಿ 76ನೇ ನಿಮಿಷದಲ್ಲಿ ರೆನಾಟೊ ಆಗಸ್ಟೊ ಗೋಲ್ ದಾಖಲಿಸಿ ಸೋಲಿನ ಅಂತರ ಕಡಿಮೆಯಾಯಿತಾದರೂ, ಗೆಲುವು ತಂದುಕೊಡಲಾಗಲಿಲ್ಲ.

ಜೂನ್ 10ರಂದು ಮಂಗಳವಾರ ಸೇಂಟ್ ಪೀಟರ್ಸ್ ಬರ್ಗ್ ಕ್ರೀಡಾಂಗಣದಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಬೆಲ್ಜಿಯಂ, ಫ್ರಾನ್ಸ್ ತಂಡವನ್ನು ಎದುರಿಸಲಿದೆ. ಇದುವರೆಗೆ ಒಮ್ಮೆಯೂ ಫುಟ್ಬಾಲ್ ವಿಶ್ವಕಪ್ ಎತ್ತಿಹಿಡಿಯದ ಬೆಲ್ಜಿಯಂ, ಮೊದಲ ಬಾರಿ ಪ್ರಶಸ್ತಿ ಗೆಲ್ಲುವ ಕನಸಿನಲ್ಲಿದೆ.

 

Leave a Reply

Your email address will not be published.

Social Media Auto Publish Powered By : XYZScripts.com