ಬೀದರ್ : ಬಾವಿಯಲ್ಲಿ ಬಿದ್ದು ಒದ್ದಾಡುತ್ತಿದ್ದ ಪಶುವಿನ ಜೀವ ಉಳಿಸಿದ ಯುವಕ…!

ಕಾಲು ಜಾರಿ ಬಾವಿಗೆ ಬಿದ್ದು ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದ ಪಶುವೊಂದನ್ನು ಯುವಕನೊಬ್ಬನ ಸಾಹಸದಿಂದ ಬದುಕುಳಿದ ಘಟನೆ ಬೀದರ್ ಜಿಲ್ಲೆಯ ಔರಾದ್ ಪಟ್ಟಣದ ಝೀರಾ ಬಾವಿಯಲ್ಲಿ ನಡೆದಿದೆ.

ಪಟ್ಟಣದ ಹಳೆಗಂಜ ಬಡಾವಣೆಯಲ್ಲಿ ಬರುವ ಬಾವಿಯಲ್ಲಿ ಪಶು ಬಿದ್ದಿತ್ತು. ಅಗ್ನಿ ಶಾಮಕ ದಳದ ಸಿಬ್ಬಂಧಿ ಸೇರಿದಂತೆ ನೂರಾರು ಜನರು ಎನು ಮಾಡಲಿಕ್ಕಾಗದಿದ್ದಾಗ ಸ್ಥಳದಲ್ಲೆ ಇದ್ದ ನಯಾಜ್ ಎಂಬ ಯುವಕ ಬಾವಿಗೆ ಹಾರಿ ಪಶುವನ್ನು ಹಗ್ಗದ ಮೂಲಕ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾನೆ.

ನಯಾಜ್ ಮಾಡಿದ ಕೆಲಸಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು ಮತ್ತೊಬ್ಬರ ಸಹಾಯಕ್ಕೆ ಬಾರದ ಇಂದಿನ ದಿನಗಳಲ್ಲಿ ಪಶು ವಿನ ಸಹಾಯ ಮಾಡಲು ಸಾಹಸ ಮಾಡಿರುವುದು ಸ್ಲಾಘನೀಯ ಎಂದು ಬೆನ್ನು ತಟ್ಟಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com