FIFA 2018 : ಫ್ರಾನ್ಸ್ – ಉರುಗ್ವೆ ನಡುವೆ ಕ್ವಾರ್ಟರ್ ಫೈನಲ್ ಕಾದಾಟ..

ಫಿಫಾ ವಿಶ್ವಕಪ್-2018 ಟೂರ್ನಿಯಲ್ಲಿ ಶುಕ್ರವಾರ ರಷ್ಯಾದ ನಿಝ್ನಿ ನೊವ್ಗೊರೊಡ್ ಕ್ರೀಡಾಂಗಣದಲ್ಲಿ ಫ್ರಾನ್ಸ್ ಹಾಗೂ ಉರುಗ್ವೆ ತಂಡಗಳ ನಡುವೆ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿದೆ. ಇಂದಿನ ಪಂದ್ಯವನ್ನು ಜಯಿಸಿ ಸೆಮಿಫೈನಲ್ ಗೆ ಅರ್ಹತೆ ಪಡೆಯಲು ಉಭಯ ತಂಡಗಳು ಪ್ರಯತ್ನಿಸಲಿವೆ.

16ರ ಸುತ್ತಿನ ಪಂದ್ಯದಲ್ಲಿ ಅರ್ಜೆಂಟೀನಾ ತಂಡವನ್ನು 4-3 ಗೋಲುಗಳ ಅಂತರದಿಂದ ಸೋಲಿಸಿ ಫ್ರಾನ್ಸ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಅತ್ತ ಉರುಗ್ವೆ 16 ಸುತ್ತಿನ ಪಂದ್ಯದಲ್ಲಿ ಪೋರ್ಚುಗಲ್ ತಂಡವನ್ನು 2-1 ಗೋಲ್ ಅಂತರದಿಂದ ಮಣಿಸಿ ಕ್ವಾರ್ಟರ್ ಫೈನಲ್ ಗೆ ಲಗ್ಗೆಯಿಟ್ಟಿದೆ.

2006ರ ವಿಶ್ವಕಪ್ ಫೈನಲ್ ನಲ್ಲಿ ಇಟಲಿ ತಂಡದ ಎದುರು ನಿರಾಸೆ ಅನುಭವಿಸಿದ್ದ ಫ್ರಾನ್ಸ್ ಈ ಬಾರಿ ಪ್ರಶಸ್ತಿ ಗೆಲ್ಲುವತ್ತ ಕಣ್ಣಿಟ್ಟಿದೆ. 2 ಬಾರಿ ವಿಶ್ವ ಚಾಂಪಿಯನ್ ಆಗಿರುವ ಉರುಗ್ವೆ ಮೂರನೇ ಸಲ ವಿಶ್ವಕಪ್ ಟ್ರೋಫಿ ಜಯಿಸುವ ಕನಸಿನಲ್ಲಿದೆ. ಪಂದ್ಯ ಭಾರತೀಯ ಕಾಲಮಾನದಂತೆ ಸಾಯಂಕಾಲ 7.30ಕ್ಕೆ ಪ್ರಾರಂಭಗೊಳ್ಳಲಿದೆ.

Leave a Reply

Your email address will not be published.

Social Media Auto Publish Powered By : XYZScripts.com