ಹುಟ್ಟುಹಬ್ಬದ ಸಂಭ್ರಮದಲ್ಲಿ ರಣವೀರ್ ಸಿಂಗ್ : 33ನೇ ವಸಂತಕ್ಕೆ ಕಾಲಿಟ್ಟ ಬಾಲಿವುಡ್ ಸ್ಟಾರ್..

ಬಾಲಿವುಡ್ ನಟ ರಣವೀರ್ ಸಿಂಗ್ ಶುಕ್ರವಾರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬಾಜೀರಾವ್ ಖ್ಯಾತಿಯ ಯಂಗ್ ಸೂಪರ್ ಸ್ಟಾರ್ ರಣವೀರ್ 33ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 2010ರಲ್ಲಿ ತೆರೆಕಂಡ ಮನೀಶ್ ಶರ್ಮಾ ನಿರ್ದೇಶನದ ‘ಬ್ಯಾಂಡ್ ಬಾಜಾ ಬಾರಾತ್’ ಚಿತ್ರದ ಮೂಲಕ ಪದಾರ್ಪಣೆ ಮಾಡಿದ ರಣವೀರ್, ಸದ್ಯ ಬಾಲಿವುಡ್ ಇಂಡಸ್ಟ್ರಿಯ ಬಹು ಬೇಡಿಕೆಯ ನಾಯಕ ನಟ ಎನಿಸಿಕೊಂಡಿದ್ದಾರೆ.

Image result for ranveer singh birthday

ಯಾವುದೇ ಹಿನ್ನೆಲೆಯಿಲ್ಲದೆ ಕೇವಲ ಪ್ರತಿಭೆ ಹಾಗೂ ಪರಿಶ್ರಮವನ್ನು ಮಾತ್ರವೇ ನೆಚ್ಚಿಕೊಂಡು ಸಿನೆಮಾ ರಂಗಕ್ಕೆ ಬಂದ ರಣವೀರ್, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ತಮ್ಮ ಸ್ಟೈಲಿಶ್ ಲುಕ್ಸ್, ನೈಜ ಅಭಿನಯ, ನೃತ್ಯ ಎಲ್ಲದರ ಮೂಲಕ ಯುವ ಜನಾಂಗದ ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

Image result for ranveer singh birthday

ದಿನದಿಂದ ದಿನಕ್ಕೆ ಯಶಸ್ಸಿನ ಮೆಟ್ಟಿಲೇರುತ್ತ ಸಾಗಿರುವ ರಣವೀರ್ ಸಿಂಗ್ ಬಾಲಿವುಡ್ ನ ಖ್ಯಾತ ಅಭಿನೇತ್ರಿ ದೀಪಿಕಾ ಪಡುಕೋಣೆಯೊಂದಿಗೆ ಮುಂಬರುವ ದಿನಗಳಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

 

One thought on “ಹುಟ್ಟುಹಬ್ಬದ ಸಂಭ್ರಮದಲ್ಲಿ ರಣವೀರ್ ಸಿಂಗ್ : 33ನೇ ವಸಂತಕ್ಕೆ ಕಾಲಿಟ್ಟ ಬಾಲಿವುಡ್ ಸ್ಟಾರ್..

Leave a Reply

Your email address will not be published.