ತುಮಕೂರು : ನಕಲಿ ಪೂಜಾರಿಗೆ ದೇವಸ್ಥಾನದ ಆಭರಣ ನೀಡಿ ಪೇಚಿಗೆ ಸಿಲುಕಿದ ಅಧಿಕಾರಿಗಳು..!

ತುಮಕೂರು : ಹುಲಿಯೂರಮ್ಮ ದೇವಸ್ಥಾನದ ಪೂಜಾರಿಗಳ ವಿವಾದ ಸೃಷ್ಟಿಯಾಗಿದೆ. ಹುಲಿಐಉರಮ್ಮ ದೇವಸ್ಥಾನಕ್ಕೆ ಸೇರಿದ ಆಭರಣಗಳನ್ನು ನೀಡಿ ಪೇಚಿಗೆ ಸಿಲುಕಿದ ಅಧಿಕಾರಿಗಳು ಪೇಚಿಗೆ ಸಿಲುಕಿದ್ದಾರೆ. ತಹಸಿಲ್ದಾರ್, ದೇವಸ್ಥಾನದ ಇ ಒ, ನಕಲಿ ಪೂಜಾರಿಗಳ ವಿರುದ್ಧ ಪೋಲಿಸರ ಮೊರೆ ಹೋಗಿದ್ದಾರೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಹಳೆವೂರು ಗ್ರಾಮದಲ್ಲಿರುವ ದೇವಸ್ಥಾನ. ಎರಡು ವರ್ಷದ ಹಿಂದೆ ನಕಲಿ ಪೂಜಾರಿಗಳಿಗೆ ಆಭರಣ ನೀಡಿದ್ದ ಅಧಿಕಾರಿಗಳು. ನಕಲಿ ಪೂಜಾರಿಗಳಾದ ಹೆಚ್ ಬಿ ಮಹಾದೇವ್,ಎಚ್ ಎಂ ಪ್ರಭಾಕರಗೆ ಆಭರಣಗಳನ್ನು ನೀಡಿದ್ದರು. ಇದನ್ನು ಪ್ರಶ್ನಿಸಿ ಅಸಲಿ ಪೂಜಾರಿಗಳಾದ ಹೆಚ್ ಎಸ್ ಮಹಾದೇವ್, ಸಿದ್ದರಾಜು, ಯೋಗಣ್ಣ ಜಿಲ್ಲಾಧಂಡಾದಿಕಾರಿಯ ಮೊರೆ ಹೋಗಿದ್ದರು.

28-01-17 ರಂದು ಅಸಲಿ ಪೂಜಾರಿಗಳ ಪರ ತೀರ್ಪು ನೀಡಿ ಜಿಲ್ಲಾಧಿಕಾರಿ ಆದೇಶಿಸಿದ್ದರು. ಜಿಲ್ಲಾಧಿಕಾರಿ ಆದೇಶಕ್ಕೂ ಮಣಿಯದೇ ನಕಲಿಗಳು ಪೂಜಾರಿಗಳು ಪೂಜಾರಿಕೆ ವೃತ್ತಿಯನ್ನು ಮುಂದುವರಿಸಿದ್ದಾರೆ. ದೇವರ ಉತ್ಸವ ಮೂರ್ತಿ( ಕರಡಿ ದೇವರು), ಆಭರಣಗಳನ್ನು ನಕಲಿ‌ ಪೂಜಾರಿಗಳು  ತಮ್ಮ ಮನೆಯಲ್ಲೆ  ಇಟ್ಟುಕೊಂಡಿದ್ದಾರೆ.

ಆಭರಣ ಹಾಗೂ ಕರಡಿ ದೇವರು( ಉತ್ಸವ ಮೂರ್ತಿ) ಪಡೆಯಲು ಅಧಿಕಾರಿಗಳ ಪರದಾಟ ನಡೆಸಿದ್ದಾರೆ. ನಕಲಿ ಪೂಜಾರಿ ಹೆಚ್ ಮಹಾದೇವ್, ಹಾಗೂ ಹೆಚ್ ಬಿ ರಘು,ರಾಜಶೇಖರ್, ಹೆಚ್ ಎಂ ಪ್ರಭಾಕರ್ ವಿರುದ್ದ ಹುಲಿಯೂರುದುರ್ಗ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ನಕಲಿ ಪೂಜಾರಿಗಳ ಕೈಗೆ ಆಭರಣ ನೀಡಿದ ಅಧಿಕಾರಿಗಳು ಇಂಗು ತಿಂದ ಮಂಗನಂತಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com