ಜಮ್ಮ-ಕಾಶ್ಮೀರ : ಪೋಲೀಸ್ ಕಾನ್ಸಟೇಬಲ್ ಅಪಹರಿಸಿ ಹತ್ಯೆಗೈದ ಉಗ್ರರು..

ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರಿಂದ ಗುರುವಾರ ಅಪಹರಣಕ್ಕೊಳಗಾಗಿದ್ದ ಪೋಲೀಸ್ ಕಾನ್ಸಟೇಬಲ್ ಶವ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ. ಗುರುವಾರ ಸಾಯಂಕಾಲ ಪೋಲೀಸ್ ಪೇದೆಯನ್ನು ಜಾವೇದ್ ಅಹ್ಮದ್ ದಾರ್ ಅವರನ್ನು ವೇಹಿಲ್ ಗ್ರಾಮದ ನಿವಾಸದ ಹತ್ತಿರ ಭಯೋತ್ಪಾದಕರು ಅಪಹರಿಸಿದ್ದರು.

ಗುರುವಾರ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಜಾವೇದ್ ಅಹ್ಮದ್ ಅವರನ್ನು ಉಗ್ರರಿಂದ ಅಪಹರಣಕ್ಕೊಳಗಾಗಿದ್ದರು. ಪೋಲೀಸ್ ಪೇದೆಯ ಶೋಧಕ್ಕಾಗಿ ಸೇನಾ ಪಡೆಯ ಸದಸ್ಯರು ಕಾರ್ಯಾಚರಣೆ ನಡೆಸಿದ್ದರು. ಶೋಪಿಯನ್ ಬಳಿಯ ದಂಗಾಮ್ ರಸ್ತೆಯಲ್ಲಿ ಜಾವೇದ್ ಶವ ಪತ್ತೆಯಾಗಿದೆ.

ಕಳೆದ ತಿಂಗಳು ಪುಲ್ವಾಮಾ ಜಿಲ್ಲೆಯಲ್ಲಿ ಸೇನೆಯ ಯೋಧ ಔರಂಗಜೇಬ್ ನನ್ನು ಅಪಹರಿಸಿ ಹತ್ಯೆಗೈಯಲಾಗಿತ್ತು.

Leave a Reply

Your email address will not be published.

Social Media Auto Publish Powered By : XYZScripts.com