FIFA 2018 : ಕ್ವಾರ್ಟರ್ ಫೈನಲ್ ಪಂದ್ಯದಲ್ಲಿಂದು ಬ್ರೆಜಿಲ್ – ಬೆಲ್ಜಿಯಂ ಮುಖಾಮುಖಿ

ಕಜಾನ್ ಅರೆನಾದಲ್ಲಿ ಶುಕ್ರವಾರ ಬ್ರೆಜಿಲ್ ಹಾಗೂ ಬೆಲ್ಜಿಯಂ ತಂಡಗಳ ನಡುವೆ ಫಿಫಾ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿದೆ. ರಷ್ಯಾ ಆತಿಥ್ಯ ವಹಿಸಿರುವ 21ನೇ ಫಿಫಾ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಲು ಉಭಯ ತಂಡಗಳು ಸೆಣಸಾಟ ನಡೆಸಲಿವೆ. ಬಲಿಷ್ಠ ತಂಡಗಳ ರೋಚಕ ಹಣಾಹಣಿಗಾಗಿ ಅಭಿಮಾನಿಗಳು ಕಾತರಾಗಿದ್ದಾರೆ.

16ರ ಸುತ್ತಿನ ಪಂದ್ಯದಲ್ಲಿ ಮೆಕ್ಸಿಕೊ ತಂಡವನ್ನು 2-0 ಗೋಲುಗಳ ಅಂತರದಿಂದ ಮಣಿಸಿದ ಬ್ರೆಜಿಲ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಇನ್ನೊಂದೆಡೆ ಬೆಲ್ಜಿಯಂ  ಜಪಾನ್ ವಿರುದ್ಧ 3-2 ರಿಂಧ ರೋಚಕ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಗೆ ಲಗ್ಗೆಯಿಟ್ಟಿದೆ.

ಬ್ರೆಜಿಲ್ ನೆಯ್ಮರ್ ಜೂನಿಯರ್, ಫಿಲಿಪ್ ಕೌಟಿನ್ಹೊ, ಮಾರ್ಸೆಲೊ ವಿಯೆರಾ, ಥಿಯಾಗೊ ಸಿಲ್ವಾ ಹಾಗೂ ವಿಲ್ಲಿಯನ್ ರಂತಹ ಪ್ರಮುಖ ಆಟಗಾರರನ್ನು ಅವಲಂಬಿಸಿದೆ. ಬೆಲ್ಜಿಯಂ ತಂಡದಲ್ಲಿ ಈಡನ್ ಹಜಾರ್ಡ್ ಹಾಗೂ ರೊಮೆಲು ಲುಕಾಕು ಪ್ರಮುಖ ಆಟಗಾರರೆನಿಸಿದ್ದಾರೆ. ಪಂದ್ಯ ಭಾರತೀಯ ಕಾಲಮಾನದಂತೆ ರಾತ್ರಿ 11.30ಕ್ಕೆ ಆರಂಭವಾಗಲಿದೆ.

Leave a Reply

Your email address will not be published.

Social Media Auto Publish Powered By : XYZScripts.com