ಬಾಗಲಕೋಟೆ : ಬಾರಿನಲ್ಲಿ ಬನಿಯನ್ ಮೇಲೆ ಕುಳಿತು ಡಿಡಿ ಬಿಲ್ ಬುಕ್ ಬರೆದ ಖಾಸಗಿ ನೌಕರ..!

ಖಾಸಗಿ ಕಂಪನಿ ನೌಕರನೊಬ್ಬ ಬಾರ್ ನಲ್ಲಿ ಶರ್ಟ್ ಬಿಚ್ಚಿ ಡಿಡಿ ಬಿಲ್ ಬರೆಯುತ್ತಿದ್ದ ಘಟನೆ ಬಾಗಲಕೋಟೆ ನಗರದ ವಿಸ್ಟಾ ಹೊಟೆಲ್ ನಲ್ಲಿ ನಡೆದಿದೆ. ಒಂದು ಕೈಯಲ್ಲಿ ಎಣ್ಣೆ ಮತ್ತೊಂದು ಕೈಯಲ್ಲಿ ಡಿಡಿ ಬಿಲ್ ಬುಕ್ ಬಾರ್ ನಲ್ಲಿ ಬನಿಯನ್ ಮೇಲೆ ಕುಳಿತು ಖಾಸಗಿ ಕಂಪನಿ ನೌಕರ ದರ್ಬಾರ್ ನಡೆಸಿದ್ದಾನೆ.

ರಾಜಾರೋಷವಾಗಿ ಸಾರಾಯಿ ಕುಡಿಯುತ್ತ ಕೃಷಿ ಭಾಗ್ಯ ಸಾಮಗ್ರಿ ಬಿಲ್ ಬರೆಯುತ್ತಿದ್ದ. ರೈತರ ಹೆಸರಿನಲ್ಲಿರುವ ಐದು ನೂರಕ್ಕೂ ಹೆಚ್ಚು ಡಿಡಿಗಳ ಅನುಸಾರ ರೈತರ ಹೆಸರನ್ನು ಬಿಲ್ ಬುಕ್ ನಲ್ಲಿ ಬರೆಯುತ್ತಿದ್ದ. ಸಂಶಯ ಬಂದು ಸ್ಥಳೀಯ ಬಿಜೆಪಿ ಕಾರ್ಯಕರ್ತರು ವಿಚಾರಿಸಿದ್ದಾರೆ.

ಪ್ರಶ್ನೆ ಮಾಡಿದ್ದಕ್ಕೆ ತಿರುಗಿ ಆವಾಜ್ ಹಾಕಿದ್ದಾನೆ. ಖಾಸಗಿ ನೌಕರನ ವರ್ತನೆಗೆ ಬಾರ್ ನಿಂದ ಹೊರತಂದು ಹಿಗ್ಗಾಮುಗ್ಗಾ ಥಳಿಸಿ ಬಿಜೆಪಿ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ.

ಪಾರ್ಚುನ್ ಸೇಲ್ಸ್ ಕಾರ್ಪೋರೇಷನ್ ಕಂಪನಿ ನೌಕರ ಮಂಜುನಾಥ ಪತ್ತೇಪುರ ಬಾರ್ ನಲ್ಲಿ ಡಿಡಿ ಬಿಲ್ ಬರೆಯುತ್ತ ಕುಳಿತಿದ್ದಾನೆ. ತೋಟಗಾರರಿಗೆ, ಕೃಷಿ ಇಲಾಖೆಯಿಂದ ನೀಡಲಾಗಿರುವ ಪಾರ್ಚೂನ್ ಸೇಲ್ಸ್ ಕಾರ್ಪೊರೇಷನ್ ಕಂಪನಿ ಹೆಸರಲ್ಲಿನ ಡಿಡಿಗಳನ್ನು ಬರೆಯುತ್ತ ಕುಳಿತಿದ್ದ.

ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ವಿತರಿಸಲಾದ ತಾಡಪಲ್ ಗಳ ಹಂಚಿಕೆಯಲ್ಲಿ ಗೋಲ್ ಮಾಲ್ ಎಂದು ಬಿಜೆಪಿ ಕಾರ್ಯಕರ್ತರ ಆರೋಪವಾಗಿದೆ. ನೌಕರನನ್ನು ಥಳಿಸಿದ ಬಿಜೆಪಿ ಕಾರ್ಯಕರ್ತರು ತನಿಖೆಗೆ ಆಗ್ರಹಿಸಿದ್ದಾರೆ. ಮಂಜುನಾಥ ಪತ್ತೇಪುರನ ಡಿಡಿ, ಬಿಲ್ ಬಿಜೆಪಿ ಕಾರ್ಯಕರ್ತರು ವಶಪಡಿಸಿಕೊಂಡಿರುವ ಬಿಜೆಪಿ ಕಾರ್ಯಕರ್ತರು ಆತನನ್ನು ನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

 

One thought on “ಬಾಗಲಕೋಟೆ : ಬಾರಿನಲ್ಲಿ ಬನಿಯನ್ ಮೇಲೆ ಕುಳಿತು ಡಿಡಿ ಬಿಲ್ ಬುಕ್ ಬರೆದ ಖಾಸಗಿ ನೌಕರ..!

Leave a Reply

Your email address will not be published.