ಸಿದ್ಧಗಂಗಾ ಶ್ರೀಗಳಿಗೆ ಪ್ರಶಸ್ತಿ ನೆಪದಲ್ಲಿ ಭಕ್ತರಿಂದ ಹಣ ವಸೂಲಿ ಆರೋಪ : 3 ಮಹಿಳೆಯರ ಬಂಧನ

ತುಮಕೂರು : ಸಿದ್ದಗಂಗ ಶ್ರೀಗಳಿಗೆ ಪ್ರಶಸ್ತಿ ನೆಪದಲ್ಲಿ ಹಣ ವಸೂಲಿ ಮಾಡಿರುವ ಆರೋಪದ ಮೇಲೆ ಮೂವರು ಮಹಿಳೆಯರನ್ನು ಬಂಧಿಸಲಾಗಿದ್ದು,, ಬಂಧಿತರಿಂದ ಕರ ಪತ್ರ ವಶಪಡಿಸಿಕೊಳ್ಳಲಾಗಿದೆ. ಭಾರತರತ್ನ, ನೊಬೆಲ್ ಪ್ರಶಸ್ತಿಗೆ ಸಹಿ ಸಂಗ್ರಹದ ಹೆಸರಲ್ಲಿ ಹಣ ವಸೂಲಿ ಮಾಡಲಾಗಿತ್ತು. ಕುಣಿಗಲ್ ಪಟ್ಟಣದ ವ್ಯಾಪಾರಿಗಳು, ಭಕ್ತರಿಂದ ಹಣ ಸಂಗ್ರಹಿಸುತ್ತಿದ್ದರು.

ಅಖಿಲ ಭಾರತ ಪೋಷಕರ ಮತ್ತು ವಿದ್ಯಾರ್ಥಿಗಳ ಮಹಾ ಸಂಘದ ಹೆಸರಲ್ಲಿ ಮೋಸ ನಡೆದಿದ್ದು, ಮಹಿಳೆಯರ ಬಗ್ಗೆ ಸಂಶಯಗೊಂಡ ಕುಣಿಗಲ್ ವರ್ಷಿಣಿ ಪ್ರಾವಿಜನ್ ಸ್ಟೋರ್ ಮಾಲೀಕ ಸೋಮಶೇಖರ್ ರಿಂದ ಕೃತ್ಯ ಬಯಲಾಗಿದೆ.  ತ್ರಿವಿಧ ದಾಸೋಹಿ ಹೆಸರಲ್ಲಿ ವಂಚನೆಗಿಳಿದ ಮಹಿಳೆಯರ ತಂಡದ ಹಣ ವಸೂಲಿ ಬಗ್ಗೆ ಸೋಮಶೇಖರ್ ಮಠದ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದಾರೆ.

ಸಂಘ ಅನಧಿಕೃತ ಎಂದು ಮಠದ ಆಡಳಿತ ಮಂಡಳಿ ಖಚಿತಪಡಿಸಿದೆ. ಆರೋಪಿಗಳು ಕುಣಿಗಲ್ ಪೋಲಿಸರ ವಶಕ್ಕೆ ಒಪ್ಪಿಸಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com