ಹುಟ್ಟುಹಬ್ಬದ ಸಂಭ್ರಮದಲ್ಲಿ ಪಿ.ವಿ ಸಿಂಧು : 23ನೇ ವಸಂತಕ್ಕೆ ಕಾಲಿಟ್ಟ ಬ್ಯಾಡ್ಮಿಂಟನ್ ತಾರೆ

ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ, ಓಲಿಂಪಿಕ್ ಪದಕ ವಿಜೇತೆ ಪಿ.ವಿ ಸಿಂಧು ಗುರುವಾರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, 23ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 1995 ಜುಲೈ 5 ರಂದು ಹೈದರಾಬಾದ್ ನಲ್ಲಿ ಜನಿಸಿದ ಸಿಂಧು ಪೂರ್ಣ ಹೆಸರು ಪುಸರ್ಲ ವೆಂಕಟ ಸಿಂಧು ಎಂಬುದಾಗಿದೆ.

Image result for p v sindhu birthday

ಭಾರತದ ಖ್ಯಾತ ಬ್ಯಾಡ್ಮಿಂಟನ್ ಕ್ರೀಡಾಪಟು ಪುಲ್ಲೇಲ ಗೋಪಿಚಂದ್ ಅವರಿಂದ ಪ್ರೇರಿತರಾದ ಸಿಂಧು 8ನೇ ವಯಸ್ಸಿನಿಂದ ಬ್ಯಾಡ್ಮಿಂಟನ್ ಆಡಲು ಶುರು ಮಾಡಿದರು. ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ಆರಂಭಿಸಿದ ಸಿಂಧು, ಜೂನಿಯರ್ ಹಾಗೂ ಸಬ್ ಜೂನಿಯರ್ ಮಟ್ಟದಲ್ಲಿ ಹಲವು ಟೂರ್ನಮೆಂಟ್ ಗಳಲ್ಲಿ ಜಯ ಸಾಧಿಸಿದರು. ಸ್ವಂತ ಪರಿಶ್ರಮ ಹಾಗೂ ಗುರು ಗೋಪಿಚಂದ್ ಮಾರ್ಗದರ್ಶನದಲ್ಲಿ ಪಳಗಿದ ಸಿಂಧು ದಿನದಿಂದ ದಿನಕ್ಕೆ ಬ್ಯಾಡ್ಮಿಂಟನ್ ನಲ್ಲಿ ಪರಿಣಿತಿ ಸಾಧಿಸಿದರು.

Image result for p v sindhu birthday

2016ರಲ್ಲಿ ಬ್ರೆಜಿಲ್ ರಾಜಧಾನಿ ರಿಯೋ ಡಿ ಜನೈರೋದಲ್ಲಿ ನಡೆದ ಓಲಿಂಪಿಕ್ಸ್ ನಲ್ಲಿ ಪಿ.ವಿ ಸಿಂಧು ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ತಲುಪಿದ್ದರು. ಅಂತಿಮ ಹಣಾಹಣಿಯಲ್ಲಿ ಸ್ಪೇನ್ ದೇಶದ ಕೆರೋಲಿನಾ ಮರೀನ್ ಎದುರು ಸೋತು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಢಿದ್ದರು. ಓಲಿಂಪಿಕ್ ಪಂದ್ಯಾವಳಿಯಲ್ಲಿ ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಭಾರತಕ್ಕೆ ಮೊದಲ ರಜತ ಪದಕ ಗಳಿಸಿಕೊಟ್ಟ ಹೆಮ್ಮೆ ಸಿಂಧು ಅವರದ್ದಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com