ದಿನೇಶ್ ಗುಂಡೂರಾವ್ KPCC ನೂತನ ಸಾರಥಿ, ಕಾರ್ಯಾಧ್ಯಕ್ಷರಾಗಿ ಈಶ್ವರ್ ಖಂಡ್ರೆ ನೇಮಕ…

ಹಲವು ದಿನಗಳಿಂದ ಕುತೂಹಲ ಕೆರಳಿಸಿದ್ದ ರಾಜ್ಯ ರಾಜಕಾರಣದ ಪ್ರಶ್ನೆಯೊಂದಕ್ಕೆ ಉತ್ತರ ಸಿಕ್ಕಿದ್ದು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಯ ನೂತನ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ನೇಮಕವಾಗಿದ್ದಾರೆ.

ನ ಎಐಸಿಸಿ ಸಂಘಟನಾ ವಿಭಾಗದ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಕಾರ್ಯಾಧ್ಯಕ್ಷರಾಗಿ ಮಾಜಿ ಸಚಿವ ಈಶ್ವರ್ ಖಂಡ್ರೆ ನೇಮಕವಾಗಿದ್ದಾರೆ.

ಹಾಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದು ಅವರ ಜಾಗಕ್ಕೆ ಹೊಸಬರ ನೇಮಕಕ್ಕೆ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿತ್ತು. ಹಾಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ದಿನೇಶ್ ಗುಂಡೂರಾವ್ ಹೆಸರು ಆರಂಭದಿಂದಲೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದಿತ್ತು.

ಆದರೆ ದಿನೇಶ್ ಗುಂಡೂರಾವ್ ಅವರಿಗಿಂತ ಹಿರಿಯರು ಈ ಹುದ್ದೆ ಮೇಲೆ ಕಣ್ಣಿಟ್ಟಿದ್ದರು. HK ಪಾಟೀಲ್, K H ಮುನಿಯಪ್ಪ, KD ಶಿವಕುಮಾರ ಜೊತೆಗೆ ಪ್ರಬಲ ಸಮುದಾಯದವರು ತಮ್ಮ ಜಾತಿಯವರಿಗೆ ಈ ಹುದ್ದೆ ನೀಡಿ ಎಂಬ ಬೇಡಿಕೆ ಇಟ್ಟಿದ್ದರಿಂದ ಕರ್ನಾಟಕ ಕಾಂಗ್ರೆಸ್ ಗೆ ಯಾರು ಸಾರಥಿಯಾಲಿದ್ದಾರೆ ಎಂಬುದು ಕುತೂಹಲ ಹುಟ್ಟಿಸಿತ್ತು.  ಇಗ ಅದಕ್ಕೆ ಉತ್ತರ ಸಿಕ್ಕಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಯುವ ನಾಉಕರ ಮೇಲೆ ವಿಶ್ವಾಸ ವಿಟ್ಟಿದ್ದು, ಬ್ರಾಮಣ ಮತ್ತು ಲಿಂಗಾಯತ ಹೊಂದಾಣಿಕೆಉಲ್ಲಿ ಮುನ್ನಡೆಯಲಿದೆ..

Leave a Reply

Your email address will not be published.

Social Media Auto Publish Powered By : XYZScripts.com