ಬಜೆಟ್ ನಲ್ಲಿ ರೈತರ ಮೂಗಿಗೆ ತುಪ್ಪ ಹಚ್ಚುವ ಕೆಲಸ ನಡೆದಿದೆ : ಕುರಬೂರು ಶಾಂತಕುಮಾರ್ ಆಕ್ರೋಶ

ದೋಸ್ತಿ ಸರ್ಕಾರದ ಬಜೆಟ್‌ನಲ್ಲಿ ರೈತರ ಸಾಲಮನ್ನಾ ವಿಚಾರವಾಗಿ ಕುರಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ ಈ ಬಜೆಟ್ ತಂತ್ರಗಾರಿಕೆಯಲ್ಲಿ ಕುತಂತ್ರದ ಒಂದು ವ್ಯವಸ್ಥೆ. ಇದು ರೈತರ ಮೂಗಿಗೆ ತುಪ್ಪ ಹಚ್ಚುವಂತ ಕೆಲಸ. ಈ ಸಾಲಮನ್ನಾದಲ್ಲಿ ಅನುಮಾನ ಮೂಡುತ್ತಿದೆ ‘
ಮೈಸೂರಿನಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿಕೆ ನೀಡಿದ್ದಾರೆ.

‘ ಸಾಲಮನ್ನಾ ಮಾಡ್ತೀನಿ ಅಂತೇಳಿ ಸುಸ್ತಿ ಸಾಲ ಮನ್ನಾ ಮಾಡಿದ್ದೀರಾ.? ನಮಗೆ ಸುಸ್ತಿ ಸಾಲಮನ್ನಾ ಬೇಡ, ನಮಗೆ ಬೆಳೆ ಸಾಲ ಬೇಕು. ಈ ರೀತಿಯ ನಡುವಳಿಕೆ ಒಳ್ಳೆಯದಲ್ಲ. ನಿಮ್ಮ ಮೇಲೆ ರಾಜ್ಯದ ರೈತರು ಬಹಳಷ್ಟು ನಂಬಿಕೆ ಇಟ್ಟಿದ್ದಾರೆ. ಆದರೆ ನೀವೂ ಆ ನಂಬಿಕೆಗೆ ಮೋಸ ಮಾಡುವ ಕೆಲಸ ಮಾಡಿದ್ದೀರಾ ‘ ಎಂದಿದ್ದಾರೆ.

‘ ನಮಗೆ ಕರೆದು ಸಭೆ ಮಾಡುವಾಗ ಮೊದಲು ಆಶ್ವಾಸನೆ ಕೊಟ್ಟಿದ್ದೀರಾ. ಒಂದು ತಿಂಗಳು ಸಮಯಾವಕಾಶ ಕೇಳಿ ಇದೀಗಾ ಕುತಂತ್ರ ಮಾಡಿದ್ದೀರಾ.! ‘ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲಮನ್ನಾ ವಿಚಾರವೇ ಪ್ರಸ್ತಾಪವಿಲ್ಲ. ನಮಗೆ ಬೆಳೆ ಸಾಲ ಮನ್ನಾ ಆಗಬೇಕು.? ಸುಸ್ತಿ ಸಾಲ ಬೇಡ. ನೀವೂ ಮಾಡಿರೋ ಘೋಷಣೆ ಅನುಮಾನ ಮೂಡಿಸಿದೆ ‘ ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com