Karnataka budget : ರೈತರ ಸಾಲ ಮನ್ನಾ, ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ…HDK

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಮೊದಲ ಬಜೆಟ್ ಅನ್ನು ಹಣಕಾಸು ಸಚಿವರೂ ಆದ, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಇಂದುಮಂಡಿಸುತ್ತಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಗೆ ಸಂಪುಟ ಸಭೆ ನಡೆದಿದ್ದು, ನಂತರ11:30 ರಿಂದ ಬಜೆಟ್ ಮಂಡನೆ ಆರಂಭವಾಗಿದೆ.2,18,488 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಅನ್ನು ಕುಮಾರಸ್ವಾಮಿ ಮಂಡಿಸಿದ್ದಾರೆ.

ರಾಜ್ಯದ ಬಹು ನಿರೀಕ್ಷಿತ ಸಾಲಮನ್ನಾವನ್ನು ಮಾಡಿದ್ದು, ಪ್ರತಿ ರೈತ ಕುಟುಂಬದ ಎರಡು ಲಕ್ಷ ಮೊತ್ತದ ಹಣವನ್ನು ಮನ್ನಾ ಮಾಡಲಾಗಿದೆ, ರೈತರ ಸಾಲಮನ್ನಕ್ಕಾಗಿ ಸರಿ ಸುಮಾರು 34 ಸಾವಿರ ಹಣವನ್ನು ಸಾಲಮನ್ನಾಕ್ಕಾಗಿ ಮೀಸಲಿಡಲಾಗಿದೆ. ಹಿಂದಿನ ಸರ್ಕಾರದ ಸಾಲಮನ್ನಾ ಬಾಕಿ ಪೂರ್ಣ ಪಾವತಿ ಮಾಡುವುದಾಗಿ ತಿಳಿಸಿದ್ದಾರೆ.

ಮದ್ಯದ ಮೇಲಿನ ತೆರಿಗೆ ಶೆ.4 ರಷ್ಟು ಹೆಚ್ಚಳ. ವಿದ್ಯುತ್ ದರ ಯನಿಟ್ ಗೆ 20 ಪೈಸೆ ಹೆಚ್ಚಳ. ಪೆಟ್ರೋಲ್, ಡೀಸೆಲ್ ದರ ಕ್ರಮವಾಗಿ 1.14, 1.12 ರೂ ಹೆಚ್ಚಳ. ಬಜೆಟ್ ನಲ್ಲಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಘೊಷಿಸಿದ್ದಾರೆ.

ಹಾಗೆಯೇ ಸಿದ್ದರಾಮಯ್ಯ ಸರ್ಕಾರದ ಎಲ್ಲಾ ಯೋಜನೆಗಳು ಮುಂದುವರಿಸುವುದಾಗಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಬಜೆಟ್ ನಲಿ ತಿಳಿಸಿದ್ದಾರೆ ತಿಳಿಸಿದ್ದಾರೆ.
ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವ ಬಗ್ಗೆ ಬಜೆಟ್ ನಲ್ಲಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಘೊಷಣೆ ಮಾಡಿದ್ದಾರೆ.
ಬೆಳಗಾವಿ, ಕಲಬುರಗಿ, ಮೈಸೂರಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ. ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಘಟಕ ಸ್ಥಾಪನೆ. 2 ಕೋಟಿ ರೂ. ವೆಚ್ಚದಲ್ಲಿ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಘಟಕ ಸ್ಥಾಪನೆ ಮಾಢುವುದಾಗಿ ತಿಳಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com