WATCH : T20 ಮ್ಯಾಚ್ ಸೋತರೂ ಕುಣಿದು ಸಂಭ್ರಮಿಸಿದ ಇಂಗ್ಲೆಂಡ್ ಕ್ರಿಕೆಟಿಗರು..! : ಕಾರಣವೇನು..?

ಮ್ಯಾಂಚೆಸ್ಟರ್ ಓಲ್ಡ್ ಟ್ರಾಫೊರ್ಡ್ ಅಂಗಳದಲ್ಲಿ ಮಂಗಳವಾರ ನಡೆದ ಮೊದಲ ಟಿ-20 ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಭಾರತ 8 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿತ್ತು. ಪಂದ್ಯದ ನಂತರ ಇಂಗ್ಲೆಂಡ್ ಆಟಗಾರರು ಡ್ರೆಸಿಂಗ್ ರೂಮ್ ನಲ್ಲಿ ಕುಣಿದು ಸಂಭ್ರಮಿಸಿದ್ದಾರೆ. ಮೊದಲ ಮ್ಯಾಚ್ ಸೋತು ಸರಣಿಯಲ್ಲಿ ಹಿನ್ನಡೆ ಅನುಭವಿಸಿದರೂ ಸಹ ಇಂಗ್ಲೆಂಡ್ ಆಟಗಾರರ ಸಂಭ್ರಮಾಚರಣೆಗೆ ಕಾರಣವಾಗಿದ್ದೇನು..? ಇಲ್ಲಿದೆ ಉತ್ತರ..

Image result for england cricketers celebrate fifa win

ಭಾರತ – ಇಂಗ್ಲೆಂಡ್ ನಡುವಿನ ಕ್ರಿಕೆಟ್ ಪಂದ್ಯ ಮುಗಿದ ನಂತರವೂ, ಫಿಫಾ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ಹಾಗೂ ಕೊಲಂಬಿಯಾ ತಂಡಗಳ ನಡುವೆ ಫುಟ್ಬಾಲ್ ತಂಡದ ಮ್ಯಾಚ್ ಇನ್ನೂ ನಡೆಯುತ್ತಿತ್ತು. ಈ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್ ನಲ್ಲಿ ರೋಚಕ ಗೆಲುವು ಸಾಧಿಸಿದ ಇಂಗ್ಲೆಂಡ್, ಕೊಲಂಬಿಯಾ ತಂಡವನ್ನು ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು. ಇದು ಇಂಗ್ಲೆಂಡ್ ಕ್ರಿಕೆಟಿಗರ ಸಂತಸಕ್ಕೆ ಕಾರಣವಾಗಿತ್ತು.

Image result for england cricketers celebrate fifa win

ಕೊಲಂಬಿಯಾ ವಿರುದ್ಧ ಇಂಗ್ಲೆಂಡ್ ಫುಟ್ಬಾಲ್ ತಂಡ ಜಯ ಸಾಧಿಸುತ್ತಿದ್ದಂತೆಯೇ ತಮ್ಮ ದೇಶ, ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಖುಶಿಯಲ್ಲಿ ಇಂಗ್ಲೆಂಡ್ ಕ್ರಿಕೆಟಿಗರು ಕುಣಿದು ಸಂಭ್ರಮಿಸಿದ್ದಾರೆ. ವಿಡಿಯೋ ಇಲ್ಲಿದೆ..

 

Leave a Reply

Your email address will not be published.

Social Media Auto Publish Powered By : XYZScripts.com