ಹಾಸನ ಜಿಲ್ಲೆಗೆ ಸಮ್ಮಿಶ್ರ ಸರ್ಕಾರದ ಬಜೆಟ್ ನಿಂದ ಸಿಕ್ಕಿದ್ದೇನು..? ಇಲ್ಲಿದೆ ವಿವರ..

ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಗುರುವಾರ ಬಜೆಟ್ ಮಂಡಿಸಿದ್ದು, ಎಚ್ಡಿಕೆ ತವರು ಜಿಲ್ಲೆ ಹಾಸನಕ್ಕೆ ಏನೇನು ಸಿಕ್ಕಿದೆ..? ಎಂಬುದರ ಸಂಪೂರ್ಣ ವಿವರ ಇಲ್ಲಿದೆ..

ಹಾಸನ ಹಾಲು ಒಕ್ಕೂಟದಲ್ಲಿಸಾಮರ್ಥ್ಯದ ಮೆಗಾ ಡೇರಿ ಸ್ಥಾಪನೆಗೆ ಐವತ್ತು ಕೋಟಿ ರೂ ಅನುದಾನ.

ಹಾಸನ ನಗರದ ವೈದ್ಯಕೀಯ ಕಾಲೇಜಿಗಳಲ್ಲಿ 450 ಹಾಸಿಗೆಯ ಹೊಸ ಆಸ್ಪತ್ರೆ ನಿರ್ಮಾಣಕ್ಕೆ 200ಕೋಟಿ ರೂ.ಅನುದಾನ.

ಪ್ರವಾಸೋದ್ಯಮದ ಮೂಲಕ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಬೇಲೂರಿನಲ್ಲಿ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ಸಂಕಲ್ಪ. ಕೌಶಲ್ಯ ತರಬೇತಿಗಾಗಿ ಖಾಸಗಿ ಸಂಸ್ಥೆಗೆ ತಲಾ 60 ಲಕ್ಷ ರೂ ಷೇರು ಬಂಡವಾಳ ಹೂಡಿಕೆ.

ಹಾಸನ ನಗರಕ್ಕೆ ರೂ. 30 ಕೋಟಿ ವೆಚ್ಚದಲ್ಲಿ ರಿಂಗ್ ರೋಡ್ ಸೌಲಭ್ಯ

ಹಾಸನ ಸ್ನಾನಗೃಹ ಉಪಕರಣಗಳ ಉತ್ಪಾದನಾ ಜಿಲ್ಲೆಯಾಗಿ ಅಭಿವೃದ್ದಿ.

ಹಾಸನ ತಾಲೂಕಿಗೆ 160 ಕೆರೆಗಳಿಗೆ ಹೇಮಾವತಿ ನೀರು. ಇದಕ್ಕಾಗಿ 70 ಕೋಟಿ ರೂಪಾಯಿಗಳ ಯೋಜನೆ ಜಾರಿ.

ಬೇಲೂರಿನಲ್ಲಿ ಪ್ರವಾಸಿ ಗೈಡ್ ಗಳಿಗೆ ತರಬೇತಿ ನೀಡಲು ಖಾಸಗಿ ತರಬೇತಿ ಸಂಸ್ಥೆಗೆ.

ಸ್ಟಾರ್ ಹೋಟೆಲ್ ನಿರ್ಮಾಣಕ್ಕೆ ಪ್ರೋತ್ಸಾಹ.

ಬಜೆಟ್ ನಿಂದ ನಿರಾಸೆ

ಪ್ರಸ್ತಾಪಿತ ಬೂವನಹಳ್ಳಿ ವಿಮಾನ ನಿಲ್ದಾಣ ಯೋಜನೆಗೆ ಯಾವುದೇ ಘೋಷಣೆ ಇಲ್ಲ.

ಕೈಗಾರಿಕಾ ವಲಯ ಅಭಿವೃದ್ದಿಗೆ ಘೋಷಣೆ ಇಲ್ಲ.

ಜಿಲ್ಲೆಯ ವಿವಿಧ ತಾಲೂಕುಗಳ ಏತ ನೀರಾವರಿ ಯೋಜನೆಗಳಿಗೆ ಅನುದಾನ ಪ್ರಸ್ತಾಪ ಇಲ್ಲ.

ಜಿಲ್ಲೆಯ ಕೃಷಿ ಮಾರುಕಟ್ಟೆ ಅಭಿವೃದ್ದಿ, ಸಂಪರ್ಕ ವ್ಯವಸ್ಥೆ, ಮೂಲ ಸೌಕರ್ಯಾಭಿವೃದ್ದಿಗೆ ಹಣ ಇಲ್ಲ.

ಗೊರೂರು ಜಲಾಶಯದ ಆವರಣದ 100 ಎಕರೆಯಲ್ಲಿ ಬೌದ್ದ ವಿಹಾರ ನಿರ್ಮಾಣಕ್ಕೆ ಹಣವಿಲ್ಲ.

ಪಶು ಆಹಾರ ಘಟಕ ಸ್ಥಾಪನೆಗೆ ಪೂರಕ ಅನುದಾನದ ಇಲ್ಲ.

ಹಾಸನ ನಗರದ ರೇಲ್ವೇ ಮೇಲ್ಸೇತುವೆಗೆ ಪೂರಕ ಯೋಜನೆಯ ಪ್ರಸ್ತಾಪವಿಲ್ಲ.

2 thoughts on “ಹಾಸನ ಜಿಲ್ಲೆಗೆ ಸಮ್ಮಿಶ್ರ ಸರ್ಕಾರದ ಬಜೆಟ್ ನಿಂದ ಸಿಕ್ಕಿದ್ದೇನು..? ಇಲ್ಲಿದೆ ವಿವರ..

Leave a Reply

Your email address will not be published.

Social Media Auto Publish Powered By : XYZScripts.com