ಬೀದರ್ : ಲವ್ ಜೀಹಾದ್ ಹಿಂದೆ ಡಿಸಿ ಪತ್ನಿ ಕೈವಾಡ : ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ

ಲವ್ ಜೀಹಾದ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಕಲ್ಬುರ್ಗಿ ಕಮರ್ಷಿಯಲ್ ಟ್ಯಾಕ್ಸ್ ಡಿಸಿ ಇರ್ಷಾದುಲ್ಲಾ ಖಾನ್ ಕುಟುಂಬಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬೀದರ್ ನಲ್ಲಿ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ ನಡೆಸಿತು.

ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯಲ್ಲಿ ಡಿಸಿ ಪತ್ನಿ ಹಿಂದೂ ಯುವತಿಯರ ಹೆಸರಿನಲ್ಲಿ ಫೇಸ್ ಬುಕ್, ಇನ್ಸಸ್ಟಾಗ್ರಾಂ ಅಕೌಂಟ್ ಗಳನ್ನು ತೆರೆದು ಹಿಂದೂ ಯುವತಿಯರನ್ನು ಮುಸ್ಲಿಂ ಧರ್ಮಕ್ಕೆ ಮಂತಾತರ ಮಾಡ್ತಿರುವುದು ಬಯಲಾಗಿದ್ದು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಬೀದರ್ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿರುವ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಡಿಸಿ ಇರ್ಷಾದುಲ್ಲಾ ಖಾನ್ ಅವರನ್ನು ಸೇವೆಯಿಂದ ವಜಾಗೊಳಿಸಿ ಸಮಗ್ರ ತನಿಖೆ ನಡೆಸುವಂತರ ಒತ್ತಾಯಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com