ವಿಜಯಪುರ : ತಲವಾರ್ ನಿಂದ ಕೇಕ್ ಕಟ್ ಮಾಡಿ ಬರ್ತ್ ಡೇ ಆಚರಿಸಿಕೊಂಡ BJP ಮುಖಂಡ..!

 

ಇತ್ತೀಚೆಗಷ್ಟೆ ಹುಬ್ಬಳ್ಳಿಯಲ್ಲಿ ಹಾಗೂ ಬೆಳಗಾವಿಯಲ್ಲಿ ಕೆಲ ಜನರು ಹವ್ಯಾಸಕ್ಕಾಗಿ ತಲವಾರ್ ನಿಂದ ಕೇಟ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಲಕ ದೊಡ್ಡ ಸುದ್ದಿಯಾಗಿದ್ದರು. ಆದರೆ ಇದೀಗ ವಿಜಯಪುರದಲ್ಲೂ ಸಹ ಇದೇ ಮಾದರಿಯಲ್ಲಿ ಬರ್ತಡೆ ಆಚರಿಸಿಕೊಳ್ಳಲಾಗಿದೆ. ವಿಜಯಪುರ ನಗರದ ಬಿಜೆಪಿ ಅಧ್ಯಕ್ಷ ಶಿವರುದ್ರ ಬಾಗಲಕೋಟ ಈ ರೀತಿ ಬರ್ತಡೇ ಆಚರಿಸಿಕೊಂಡಿದ್ದಾನೆ.

ಜೂನ್ 29ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಮಯದಲ್ಲಿ ತಲವಾರ್ ನಿಂದ ಕೇಕ್ ಕಟ್ ಮಾಡಿದ್ದಾನೆ. ಅಲ್ಲದೆ ಈ ಫೋಟೊವನ್ನು ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿದ್ದಾನೆ ಶಿವರುದ್ರ ಬಾಗಲಕೋಟ. ಅದೇನು ಕೆಟ್ಟ ಅಭ್ಯಾಸವೋ ಏನೊ ಗೊತ್ತಿಲ್ಲ ಹುಟ್ಟುಹಬ್ಬದ ವೇಳೆ ತಲವಾರ ಝಳಪಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಮೊದಲೆ ಭೀಮಾ ತೀರದಲ್ಲಿ ಅಪರಾಧ ಸುದ್ದಿಗಳು ಹೆಚ್ಚಾಗುತ್ತಿರುವುದರಿಂದ ರಾಜ್ಯದಲ್ಲೆ ಕ್ರೈಂ ನಲ್ಲಿ ಗುಮ್ಮಟ ನಗರಿ ವಿಜಯಪುರವೇ ಮೊದಲು ಎನ್ನುವಂತಾಗಿದೆ.

ಇಂತಹ ಸಮಯದಲ್ಲಿ ಸುಸಂಸ್ಕ್ರತರು, ಎಲ್ಲವೂ ತಿಳಿದವರು ಎನ್ನುವಂತಹವರೆ ಹೀಗೆ ಅಸಂಸ್ಕ್ರತಿ ಮಾಡುತ್ತಿರುವುದು ವಿಪರ್ಯಾಸ ಎನ್ನುವಂತಾಗಿದೆ. ಈ ಕುರಿತು ಪೊಲೀಸ್ ಇಲಾಖೆ ಇಂತಹವರಿಗೆ ಖಡಕ್ ಎಚ್ಚರಿಕೆ ನೀಡುವ ಮೂಲಕ ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ.

Leave a Reply

Your email address will not be published.

Social Media Auto Publish Powered By : XYZScripts.com