ಬಾಲಿವುಡ್ ನಟಿ ಸೋನಾಲಿ ಬೇಂದ್ರೆಗೆ ಕ್ಯಾನ್ಸರ್.! : ನ್ಯೂಯಾರ್ಕ್‍ನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು

ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಹೈ ಗ್ರೇಡ್ ಕ್ಯಾನ್ಸರ್ ಗೆ ಗುರಿಯಾಗಿದ್ದಾರೆ. ಕ್ಯಾನ್ಸರ್ ಇರುವಿಕೆಯ ವಿಷಯವನ್ನು ಸ್ವತಃ ಸೋನಾಲಿ ಬೇಂದ್ರೆ ಸಾಮಾಜಿಕ ಜಾಲತಾಣ ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಹೊರಹಾಕಿದ್ದು. ವೈದ್ಯರ ಸಲಹೆಯಂತೆ ನ್ಯೂಯಾರ್ಕ್ ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.

Image result for sonali bendre cancer

‘ ಇತ್ತೀಚೆಗೆ ನಡೆಸಿದ್ದ ವೈದ್ಯಕೀಯ ತಪಾಸಣೆಯಲ್ಲಿ ನನಗೆ ಮೆಟಾಸ್ಟಾಟಿಕ್ ಕ್ಯಾನ್ಸರ್ ಇರುವುದು ಧೃಡಪಟ್ಟಿದೆ. ಕ್ಯಾನ್ಸರ್ ಬರುಬಹುದು ಎಂದು ಯಾವತ್ತೂ ನಿರೀಕ್ಷಿಸಿರಲಿಲ್ಲ, ಮಹಾಮಾರಿಯ ವಿರುದ್ಧ ಹೋರಾಡುತ್ತಿದ್ದೇನೆ, ನನ್ನ ಪರಿವಾರದ ಸದಸ್ಯರು ಹಾಗೂ ಆಪ್ತ ಸ್ನೇಹಿತರು ಅತ್ಯುತ್ತಮ ನೆರವು ನೀಡುತ್ತಿದ್ದಾರೆ, ವೈದ್ಯರ ಸಲಹೆಯ ಮೇರೆಗೆ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಮುಂಬರುವ ಎಲ್ಲ ತೊಂದರೆಗಳನ್ನು ಸಕಾರಾತ್ಮಕವಾಗಿ ಎದುರಿಸಲು ನಿರ್ಧರಿಸಿದ್ದೇನೆ, ನನಗೆ ನನ್ನ ಕುಟುಂಬ ಹಾಗೂ ಸ್ನೇಹಿತರ ಬೆಂಬಲವಿದೆ ‘ ಎಂದು ಹೇಳಿದ್ದಾರೆ.

ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಪ್ರೀತ್ಸೆ’ ಚಿತ್ರದಲ್ಲಿ ನಾಯಕಿಯಾಗಿ ಸೋನಾಲಿ ಬೇಂದ್ರೆ ಅಭಿನಯಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com