ಸೇತುವೆಯಿಂದ ನದಿಗೆ ಬಿದ್ದ ಬಾಲಕಿ : ಮಗಳ ಬದುಕಿಸಲು ಹೋದ ತಂದೆಯೂ ನೀರು ಪಾಲು..

ಆ ಬಾಲಕಿಯನ್ನು ತಂದೆ ಶಾಲೆ‌ಯಿಂದ ಮನೆಗೆ ಕರೆದೊಯ್ಯುತ್ತಿದ್ದ. ಇನ್ನೇನು ಅರ್ಧ ಕಿಮೀ ಹೋಗಿದ್ರೆ ತಂದೆ‌ ಮಗಳಿಬ್ಬರು ಮನೆ ಸೇರುತ್ತಿದ್ದರು.ಆದರೆ ಈಗ ಮನೆ ಬದಲು ಮಸಣದ ಹಾದಿ ಹಿಡಿದಿದ್ದಾರೆ.ತಡೆಗೋಡೆಯಿಲ್ಲದ ಸೇತುವೆ ತಂದೆ ಮಗಳ ಪಾಲಿಗೆ ಶೈತಾನವಾಗಿ ಇಬ್ಬರು ಸಾವಿನ ಮನೆ ತಲುಪಿದ್ದಾರೆ.

ಗಲಗಲಿ ಗ್ರಾಮದ ಕೃಷ್ಣಾ ನದಿ ಸೇತುವೆ ಮೇಲೆ ಬೈಕ್ ನಲ್ಲಿ ಹೊರಟ ತಂದೆ ಮಗಳು ಈಗ ನೀರು ಪಾಲಾಗಿದ್ದಾರೆ. ತಂದೆ ದಸ್ತಗೀರ್ ತನ್ನ ಮೂರು ವರ್ಷದ ಮಗಳು ಆನಮ್ ಳನ್ನು ಶಾಲೆಯಿಂದ ಮನೆಗೆ ಕರೆದೊಯ್ಯುತ್ತಿದ್ದ. ಬೈಕ್ ಮುಂದಿನ ಪೆಟ್ರೋಲ್ ಟ್ಯಾಂಕ್ ಮೇಲೆ ಆಕೆಯನ್ನು ಕೂರಿಸಿದ್ದ.ಆದರೆ ಹದಗೆಟ್ಟ ರಸ್ತೆ ಮಗಳು ಪುಟಿದು ನದಿಗೆ ಬಿದ್ದಿದ್ದಾಳೆ.ಈ ವೇಳೆ ಅವಳನ್ನು ರಕ್ಷಣೆ ಮಾಡಲು ತಂದೆ ನದಿಗೆ ಹಾರಿದ್ದು,ಇಬ್ಬರು ಸಾವನ್ನಪ್ಪಿದ್ದಾರೆ.ಮಗಳ ಶವ ಸಿಕ್ಕಿದ್ದು ತಂದೆ ದಸ್ತಗೀರ್ ಶವಕ್ಕಾಗಿ ಬೀಳಗಿ ಪೊಲೀಸರು ಶೋಧ ನಡೆಸಿದ್ದಾರೆ.

ಬೈಕ್ ನಲ್ಲಿ ದಸ್ತಗೀರ ನ ತಂದೆ ಕೂಡ ಪ್ರಯಾಣ ಮಾಡುತ್ತಿದ್ದ.ಬೈಕ್ ನಲ್ಲಿ ತಂದೆ ಹಿಂದೆ ಕೂತಿದ್ರೆ ಮಗಳನ್ನು ದಸ್ತಗೀರ್ ಪೆಟ್ರೋಲ್ ಟ್ಯಾಂಕ್ ಮೇಲೆ‌ ಕೂರಿಸಿದ್ದ.ಇನ್ನೇನು ಅರ್ಧ ಕಿಮೀ ಪ್ರಯಾಣಿಸಿದ್ದರೆ ಎಲ್ಲರೂ ಸೇಪ್ ಆಗಿ‌ ಮನೆ ಸೇರುತ್ತಿದ್ದರು.ಆದರೆ ವಿಧಿಯಾಟವೇ ಬೇರೆಯಾಗಿತ್ತು.ತಂದೆ ಮಗಳು ಸಾವಿನಲ್ಲೂ ಒಂದಾಗಿದ್ದಾರೆ. ಬಾಲಕಿ ಮತ್ತು ತಂದೆ ಸಾವನ್ನು ಕಂಡ ಕುಟುಂಬಸ್ಥರು ಕಣ್ಣೀರು ಹಾಕಿ ಗೋಳಾಡುತ್ತಿದ್ದಾರೆ. ಆದರೆ ಈ ರಸ್ತೆಗೆ ತಡೆಗೋಡೆ ಇದ್ದಿದ್ದರೆ ಈ ಎರಡು ಜೀವಗಳನ್ನು ಬದುಕಿಸಬಹುದಾಗಿತ್ತು. ಆದರೆ ಸ್ಥಳೀಯರು ಸೇತುವೆಗೆ ಇದುವರೆಗೂ ತಡೆಗೋಡೆಗಳೆ ಇಲ್ಲ ಇದಕ್ಕೆ ಜನಪ್ರತಿನಿಧಿಗಳು , ಅಧಿಕಾರಿಗಳು ಹೊಣೆ ಎನ್ನುತ್ತಿದ್ದಾರೆ.

ಒಟ್ಟಾರೆ ಸೇತುವೆ ತಡಗೋಡೆ ಇಲ್ಲದ ಕಾರಣ ಎರಡು ಜೀವಗಳು ಬಲಿಯಾಗಿದ್ದು,ಇನ್ನಾದರೂ ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಿ ಸೇತಯವೆ ಬಗ್ಗೆ ಸೂಕ್ತ‌ ಕ್ರಮ ಕೈಗೊಳ್ಳಬೇಕಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com