ಆಪರೇಷನ್ ಕಮಲ ಮಾಡಲ್ಲ, ಸಮ್ಮಿಶ್ರ ಸರ್ಕಾರ ಮಾಡ್ತಿರೋ ಪಾಪಕ್ಕೆ ಅವರೇ ಬೀಳ್ತಾರೆ : ಶೋಭಾ ಕರಂದ್ಲಾಜೆ

ಉಡುಪಿ : ‘ ಬಿಜೆಪಿ ಆಪರೇಷನ್ ಕಮಲ ಮಾಡಲ್ಲ. ಸಮ್ಮಿಶ್ರ ಸರಕಾರ ಮಾಡುತ್ತಿರುವ ಪಾಪಕ್ಕೆ ಅವರೇ ಬೀಳ್ತಾರೆ. ಮಂತ್ರಿ ಮಂಡಲ ವಿಸ್ತರಣೆಗಾಗಿ ಶಾಸಕರು ಕಾಯುತ್ತಿದ್ದಾರೆ. ಆದರೆ ಅವರನ್ನು ಸಮಾಧಾನಿಸಲು ಸರಕಾರಕ್ಕೆ ಸಾಧ್ಯವಾಗಿಲ್ಲ. ನಾವು ಜೆಡಿಎಸ್ ಜೊತೆ ಹೋಗ್ಲೇಬಾರದಿತ್ತು ಅಂತ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ ‘ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಜೆಡಿಎಸ್ ಕಾಂಗ್ರೆಸ್ ನ್ನು ಒಂದು ದಿನ ತಿಂದು ಹಾಕುತ್ತೆ ಅನ್ನೋ ಭಯದಲ್ಲಿದ್ದಾರೆ. ಕಾಂಗ್ರೆಸ್ ಹಿಂಬಾಗಿಲಿನ ಮೂಲಕ ಪಾಪದ ಕೃತ್ಯ ಎಸಗಿದ್ದಾರೆ. ನಮ್ಮೊಂದಿಗೆ ಹತ್ತಾರು ಶಾಸಕರು ಸಂಪರ್ಕದಲ್ಲಿದ್ದಾರೆ. ಆದ್ರೆ ನಮಗೆ ಹೈಕಮಾಂಡ್ ನ ಆದೇಶವಿದೆ, ನಾವು ಸರಕಾರ ಬೀಳಿಸಲ್ಲ ‘ ಎಂದು ಉಡುಪಿಯಲ್ಲಿ‌ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com