ಕೋಲಾರ : ಪ್ರಿಯಕರನೊಂದಿಗೆ ಸೇರಿ ತನ್ನ ಮಗುವನ್ನೇ ಹತ್ಯೆ ಮಾಡಿದ ತಾಯಿ..!

ಕೋಲಾರ : ಪ್ರಿಯಕರನೊಂದಿಗೆ ಸೇರಿ ತಾಯಿಯೊಬ್ಬಳು ತನ್ನ ಮಗುವನ್ನೇ ಹತ್ಯೆ ಮಾಡಿರುವ ಘಟನೆ ಕೋಲಾರ ನಗರದ ಕನಕನಪಾಳ್ಯದಲ್ಲಿ ನಡೆದಿದೆ. ಬೆಂಗಳೂರು ಮೂಲದ ನಿಖಿತಾ ಹಾಗೂ ಕೋಲಾರ ಕನಕನಪಾಳ್ಯದ ಅನಿಲ್ ಎಂಬುವವರು ಕೃತ್ಯ ಎಸಗಿದ್ದಾರೆ.

ನಿಖಿತಾ ಮೊದಲ‌ ಪತಿ ಲೋಕೇಶ್ ರ ಎರಡುವರೆ ವರ್ಷದ ಮಗು ಕುಮುದಾ ಳನ್ನು ಉಸಿರುಗಟ್ಟಿಸಿ ಕೊಲೆ‌ ಮಾಡಿದ್ದರು. ಎರಡುವರೆ ವರ್ಷದ ಹಿಂದೆ ನಿಖಿತಾ ಮೈಸೂರು ಮೂಲದ ಲೋಕೇಶ್ ನೊಂದಿಗೆ ವಿವಾಹವಾಗಿತ್ತು, ನಂತರ ಲೋಕೇಶ್ ನಿಂದ ನಿಖಿತಾ ದೂರವಾಗಿದ್ದಳು.

ಮಿಸ್ ಕಾಲ್ ಮೂಲಕ ಅನಿಲ್ ಪರಿಚಯ ಪ್ರೇಮವಾಗಿ ಇಬ್ಬರು ಮದುವೆಯಾಗಿದ್ದರು. ನಿಖಿತಾ ಅನಿಲ್ ನೊಂದಿಗೆ ಬಂದ ಹಿನ್ನೆಲೆ ಬೆಂಗಳೂರು ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಆ ಪ್ರಕರಣದ‌ ಜಾಡು ಹಿಡಿದ ಪೊಲೀಸರಿಗೆ ಮಗು ಕೊಲೆ ಪ್ರಕರಣ ಬಯಲಾಗಿದೆ. ಸದ್ಯ ಕೋಲಾರ ನಗರ ಠಾಣಾ ಪೊಲೀಸರಿಂದ ಆರೋಪಿಗಳ ಬಂದನವಾಗಿದ್ದು, ಪ್ರಕರಣದ ತನಿಖೆ ಜಾರಿಯಲ್ಲಿದೆ.

3 thoughts on “ಕೋಲಾರ : ಪ್ರಿಯಕರನೊಂದಿಗೆ ಸೇರಿ ತನ್ನ ಮಗುವನ್ನೇ ಹತ್ಯೆ ಮಾಡಿದ ತಾಯಿ..!

Leave a Reply

Your email address will not be published.

Social Media Auto Publish Powered By : XYZScripts.com