FIFA 2018 : ಕ್ವಾರ್ಟರ್ ಫೈನಲ್‍ಗೆ ಇಂಗ್ಲೆಂಡ್, ಸ್ವೀಡನ್ : ಕೊಲಂಬಿಯಾ, ಸ್ವಿಟ್ಜರ್ಲೆಂಡ್ ನಿರ್ಗಮನ

ಮಂಗಳವಾರ ನಡೆದ 16ರ ಸುತ್ತಿನ ಪಂದ್ಯದಲ್ಲಿ ಕೊಲಂಬಿಯಾ ತಂಡದ ವಿರುದ್ಧ ಪೆನಾಲ್ಟಿ ಶೂಟೌಟ್ ನಲ್ಲಿ ರೋಚಕ ಗೆಲುವು ಸಾಧಿಸಿದ ಇಂಗ್ಲೆಂಡ್ ಫಿಫಾ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಸ್ಪಾರ್ಟಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಹ್ಯಾರಿ ಕೇನ್ ಮೊದಲ ಗೋಲ್ ಬಾರಿಸಿದರು. ಕೊಲಂಬಿಯಾದ ಡಿಫೆಂಡರ್ ಎರ್ರಿ ಮೀನಾ ಕೊನೆಯ ಕ್ಷಣದಲ್ಲಿ ಗೋಲ್ ಗಳಿಸಿ ಸ್ಕೋರ್ ಸಮವಾಗಲು ಕಾರಣರಾದರು.

90 ನಿಮಿಷಗಳ ಅವಧಿ ಪೂರ್ಣಗೊಂಡ ನಂತರವೂ ಉಭಯ ತಂಡಗಳ ಸ್ಕೋರ್ 1-1 ರಿಂದ ಸಮವಾಗಿತ್ತು. ಬಳಿಕ ನಡೆದ ಪೆನಾಲ್ಟಿ ಶೂಟೌಟ್ ನಲ್ಲಿ ಇಂಗ್ಲೆಂಡ್ 4-3 ರಿಂದ ಜಯ ಗಳಿಸಿತು.

ಸೇಂಟ್ ಪೀಟರ್ಸ್ ಬರ್ಗ್ ಮೈದಾನದಲ್ಲಿ ನಡೆದ 16ರ ಸುತ್ತಿನ ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್ ತಂಡವನ್ನು 1-0 ಗೋಲುಗಳ ಅಂತರದಿಂದ ಮಣಿಸಿದ ಸ್ವೀಡನ್ ಫಿಫಾ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್ ಗೆ ಲಗ್ಗೆಯಿಟ್ಟಿದೆ. ಸ್ವೀಡನ್ ಪರವಾಗಿ ಎಮಿಲ್ ಫಾರ್ಸ್ಬರ್ಗ್ 66ನೇ ನಿಮಿಷದಲ್ಲಿ ಗೋಲ್ ದಾಖಲಿಸಿದರು.

 

 

Leave a Reply

Your email address will not be published.

Social Media Auto Publish Powered By : XYZScripts.com